ಕುಂದಾಪುರ ಮಿರರ್ ಸುದ್ದಿ…
ಬೈಂದೂರು : ರೈತರು ಕೃಷಿಯಲ್ಲಿ ಬಹಳ ಹುಮ್ಮಸ್ಸಿನಿಂದ ತೊಡಗಿಸಿಕೊಂಡಿದ್ದಾರೆ. ಬೆಳೆಯನ್ನು ಉತ್ತಮ ಫಸಲಿನೊಂದಿಗೆ ಬೆಳೆಯುತ್ತಿದ್ದಾರೆ ಆದರೆ ಮಾರುಕಟ್ಟೆಯಲ್ಲಿ ಸರಿಯಾದ ಧಾರಣೆ ಇಲ್ಲದೆ ರೈತರು ಕೃಷಿಯಿಂದ ಹಿಮ್ಮುಖ ರಾಗುತ್ತಿದ್ದಾನೆ ಆದ್ದರಿಂದ ರೈತರು ತಾವು ಬೆಳೆದ ಬೆಳೆಯನ್ನು ಸರಿಯಾದ ರೀತಿಯಲ್ಲಿ ಮೌಲ್ಯವರ್ಧನೆ ಮಾಡಿ ಸ್ಥಳೀಯವಾಗಿ ಅವಕಾಶ ಇದ್ದಲ್ಲಿ ಮಾರುಕಟ್ಟೆಯನ್ನು ತಾವೇ ಸ್ವತಃ ಮಾಡುವುದು ಸೂಕ್ತ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕೇಂದ್ರ ಕಚೇರಿ ಧರ್ಮಸ್ಥಳದ ಕೃಷಿ ಪ್ರಾದೇಶನಾಲಯದ ಹಿರಿಯ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೇಜಸ್ ಹೇಳಿದರು.

ಅವರು ಶ್ರೀ ಮೂಕಾಂಬಿಕ ಭತ್ತ ಬೆಳೆಗಾರರ ಒಕ್ಕೂಟ(ರಿ) ಬೈಂದೂರು ಪ್ರವರ್ತಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಮತ್ತು ನಬಾರ್ಡ್ ಸಂಸ್ಥೆ ಬೆಂಗಳೂರು ಆಯೋಜಿಸಿರುವ ಮೂಕಾಂಬಿಕ ಭತ್ತಬೆಳೆಗಾರರ ಒಕ್ಕೂಟದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಕಾಂಬಿಕ ಭತ್ತ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಚಂದ್ರಪೂಜಾರಿಯವರು ವಹಿಸಿದ್ದರು.
ಭತ್ತ ಬೆಳೆಗಾರ ಒಕ್ಕೂಟಕ್ಕೆ ಉತ್ತಮ ರೀತಿಯಲ್ಲಿ ಬೆಂಬಲ, ಸಹಕಾರವನ್ನು ನೀಡಿ ಉತ್ತಮ ಸಾಧನೆ ಮಾಡಿರುವ ಒಕ್ಕೂಟದ ಸದಸ್ಯರಾದ ಲಲಿತಮ್ಮ ಮತ್ತು ಶಶಿಕುಮಾರ್ ರವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿರಿಧಾನ್ಯ ಘಟಕ ಧಾರವಾಡದ ಹಿರಿಯ ನಿರ್ದೇಶಕರಾದ ದಿನೇಶ್ ಎಂ, ತಾಲ್ಲೂಕಿನ ಹಿರಿಯ ಯೋಜನಾಧಿಕಾರಿ ಶಶಿರೇಖಾ ಪಿ, ಎಫ್.ಪಿ.ಸಿ ಯೋಜನಾಧಿಕಾರಿ ನಿಖಿಲೇಶ್. ಎಮ್, ಭತ್ತ ಬೆಳೆಗಾರರ ಒಕ್ಕೂಟದ ನಿರ್ದೇಶಕರಾದ ಮಂಜಯ್ಯ ಶೆಟ್ಟಿ, ರವಿರಾಜ್ ಪೂಜಾರಿ ,ಶಿವರಾಮ ಶೆಟ್ಟಿ, ಕಿರಣ್ ಕುಮಾರ್, ಸುರೇಂದ್ರ ನಾಯ್ಕ್,ರಾಜು ಪೂಜಾರಿ, ಗೀತಾ, ನೀಲು, ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿಗಳಾದ ತಿಮ್ಮಯ್ಯನಾಯ್ಕ್ , ಸದಾನಂದ, ಉಲ್ಲಾಸ ಮೇಸ್ತ, ಕೃಷಿ ಅಧಿಕಾರಿಗಳಾದ ಚೇತನ್ ಕುಮಾರ್, ಮಂಜುನಾಥ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮೇಲ್ವಿಚಾರಕರಾದ ರವಿಶಂಕರ್, ರ್ರಾಘವೇಂದ್ರ ನಿರೂಪಿಸಿ ,ಕ್ಷೇತ್ರದ ಹಿರಿಯ ಯೋಜನಾಧಿಕಾರಿ ಶಶಿರೇಖಾ ಪಿ ಯವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು.
ಕಾರ್ಯಕ್ರಮವನ್ನ ಮುಕಾಂಬಿಕಾ ಭತ್ತಬೆಳೆಗಾರ ಒಕ್ಕೂಟದ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಆಯೋಜಿಸಿದ್ದರು.











