ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನ ಮಣೂರು ಇದರ ಬ್ರಹ್ಮಕಲಶಾಭಿಷೇಕ
ಎ. 01 ಶುಕ್ರವಾರ ಹಾಗೂ 2ರ ಶನಿವಾರ ನಡೆಯಲಿದ್ದು, ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿಪಂಚಸಹಿತಪಂಚಶತ ಬ್ರಹ್ಮಕಲಶಾಭಿಷೇಕ ,ಶ್ರೀ ಹೇರಂಬ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಅಷ್ಟೋತ್ತರಶತಪರಿಕಲಶಸಹಿತ ಬ್ರಹ್ಮಕಲಶಾಭಿಷೇಕ ಕರ್ಯಕ್ರಮಗಳು ತಂತಿಗಳಾದ ವೇದಮೂರ್ತಿ ಶ್ರೀ ಗಣೇಶ ಐತಾಳ ಸಾಲಿಗ್ರಾಮ ಇವರ ನೇತೃತ್ವದಲ್ಲಿ ಹಾಗೂ ವೇದಮೂರ್ತಿ ಶ್ರೀ ರಾಮಪ್ರಸಾದ ಅಡಿಗರು ಗರಿಕೆಮಠ ಇವರ ಪೌರೋಹಿತ್ಯದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಲಿದೆ.
ಧಾರ್ಮಿಕ ಕಾರ್ಯಕ್ರಮಗಳು..
ಎ.1ರಂದು ಶುಕ್ರವಾರ ಪೂರ್ವಾಹ್ನ 8.30ರಿಂದ ಶ್ರೀ ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ದೇವನಾಂದಿ, ಋತ್ವಿಗ್ವರಣೆ, ಶ್ರೀ ಮಹಾಲಿಂಗೇಶ್ವರ,ಶ್ರೀ ಹೇರಂಬ ಗಣಪತಿ, ಶ್ರೀ ಪಾರ್ವತಿ ಅಮ್ಮನವರ ಸಾನಿಧ್ಯದಲ್ಲಿ ಪಂಚಾಮೃತ ಸೇವೆ, ನವಗ್ರಹ ಹೋಮ,ದುರ್ಗಾ ಹೋಮ ಸಂಜೆ ಗಂಟೆ 5.00ಕ್ಕೆ ಕಲಶ ಮಂಡಲ ರಚನೆ, ಮಂಡಲ ದೇವತಾರಾಧನೆ. ಶ್ರೀ ಮಹಾಲಿಂಗೇಶ್ವರ ದೇವರಿಗೆ ಪಂಚಸಹಿತಪಂಚಶತ ಬ್ರಹ್ಮಕಲಶ ಸ್ಥಾಪನೆ ಶ್ರೀ ಹೇರಂಬ ಗಣಪತಿ ದೇವರಿಗೆ ಅಷ್ಟೋತ್ತರಶತಪರಿಕಲಶ ಸಹಿತ ಪ್ರಧಾನ ಬ್ರಹ್ಮಕಲಶ ಸ್ಥಾಪನೆ, ಕಲಾತತ್ತ್ವ, ದೇವತಾ ಆವಾಹನೆ, ಹೋಮಾದಿಗಳು, ಅಷ್ಟಾವಧಾನ ಸೇವೆ, ರಕ್ಷೆ ಎ.2ರ ಶನಿವಾರ ಪೂರ್ವಾಹ್ನ 6,00ರಿಂದ ಶ್ರೀ ಮಹಾಲಿಂಗೇಶ್ವರ ದೇವರ ಸಾನಿಧ್ಯ ವೃದ್ಧಿಗಾಗಿ ಕರ್ಪೂರಾದಿ 84 ದ್ರವ್ಯಯುಕ್ತ ಪಂಚಸಹಿತಪಂಚಶತ ಬ್ರಹ್ಮಕಲಶಾಭಿಷೇಕ ,ಸಾನಿಧ್ಯ ಹೋಮ ಶ್ರೀ ಹೇರಂಬ ಮಹಾಗಣಪತಿ ದೇವರ ಬ್ರಹ್ಮಕಲಶಾಭಿಷೇಕ ಹಾಗೂ ಹೋಮಾದಿಗಳು, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಮಧ್ಯಾಹ್ನ ಗಂಟೆ 12.30ಕ್ಕೆ ಮಹಾ ಅನ್ನಸಂತರ್ಪಣೆ ಸಂಜೆ ಗಂಟೆ 6.00ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಭಾಗವಾಗಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಎಡನೀರು ಮಠ ಕಾಸರಗೋಡು ಆಶ್ರ್ರೀವಚನ ನೀಡಲಿದ್ದು ಅಧ್ಯಕ್ಷತೆವನ್ನು ದೇವಳದ ಅಧ್ಯಕ್ಷ ಸತೀಶ್ ಹೆಚ್, ಕುಂದರ್ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ,ಸಾಂಸ್ಕ್ರತಿಕ ವೈಭವ ನಡೆಯಲಿದೆ











