ಬೈಂದೂರು : ವಿದ್ಯುತ್ ದರ ಏರಿಕೆ ಡಿವೈಎಫ್ಐ ವತಿಯಿಂದ ಬೃಹತ್ ಪ್ರತಿಭಟನೆ

0
709

Click Here

Click Here

ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ)ರಾಜ್ಯ ಸಮಿತಿ ಕರೆಯಂತೆ ಸರಕಾರ ವಿದ್ಯುತ್ ದರ ಏರಿಕೆ ಖಂಡಿಸಿ,ಡಿವೈಎಫ್ಐ ಬೈಂದೂರು ತಾಲೂಕು ಸಮಿತಿ ನೇತೃತ್ವದಲ್ಲಿ ಮೆಸ್ಕಾಂ ಬೈಂದೂರು ಕಚೇರಿ ಎದುರು ಇಂದು ಬೃಹತ್ ಪ್ರತಿಭಟನೆ ಜರುಗಿತು.

ಡಿವೈಎಫ್ಐ ತಾಲೂಕು ಅಧ್ಯಕ್ಷ ವಿಜಯ ಕಿರಿಮಂಜೇಶ್ವರ ಪ್ರತಿಭಟನಾಕಾರರನ್ನುದ್ದೆಶಿಸಿ ಮಾತನಾಡಿ ಸರಕಾರದ ಸಂಸ್ಥೆಗಳಿಂದ ವಿದ್ಯುತ್‌ ಬಿಲ್ ಬಾಕಿ ಬರಬೇಕಾಗಿರುವುದನ್ನು ಈ ಕೂಡಲೇ ವಸೂಲಿಗೆ ಕ್ರಮವಹಿಸಬೇಕು, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಗೃಹ ಬಳಕೆ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

Click Here

ಡಿವೈಎಫ್ಐ ಮುಖಂಡ ಹರೀಶ್ ಬೈಂದೂರು, ಹರೀಶ್ ಪವಾಸ್ಕರ್ ಬೈಂದೂರು,ರಾಮ ಖಂಬದಕೋಣೆ, ಮಹಿಳಾ ಉಪ ಸಮಿತಿಯ ನಾಗರತ್ನ ಪಡುವರಿ, ಕರ್ನಾಟಕ ರಾಜ್ಯಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಗಣಪತಿ ಪೂಜಾರಿ ಅಮಾಸ್ಯೆಬೈಲ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬೇಡಿಕೆಗಳ ಮನವಿ ಪತ್ರವನ್ನು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ರವರ ಮೂಲಕ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇವರಿಗೆ ಸಲ್ಲಿಸಲಾಯಿತು. ಸಿಐಟಿಯು ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ವೆಂಕಟೇಶ್ ಕೋಣಿ ಇದ್ದರು.

Click Here

LEAVE A REPLY

Please enter your comment!
Please enter your name here