ಕುಂದಾಪುರ ಮಿರರ್ ಸುದ್ದಿ…
ಕೋಟ: ಮಕ್ಕಳ ಗುಣಮಟ್ಟದ ಕಲಿಕೆಯನ್ನು ದ್ರಷ್ಟಿಯಲ್ಲಿಟ್ಟುಕೊಂಡು ಸದಾ ಹೊಸ ಪ್ರಯತ್ನಗಳಿಗೆ ತೆರೆದುಕೊಳ್ಳುವ ಶಾಲೆ ಯಾವಾಗಲೂ ಒಂದು ಉತ್ತಮ ಶಾಲೆಯಾಗಿಯೇಮುಂದುವರೆಯುತ್ತದೆ. ಕಲಿಕಾ ಕುಟೀರ ಸರಕಾರಿ ಶಾಲೆಯೊಂದರ ಒಂದು ವಿಶಿಷ್ಟ ಪ್ರಯೋಗ” ಎಂದು ರಾಜ್ಯ ಪ್ರಶಸ್ತಿ ಪುರಸ್ಕ್ರತ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಶೆಟ್ಟಿ ಕೆ. ಎಂ ನುಡಿದರು.

ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು ಇಲ್ಲಿ ನೂತನವಾಗಿ ನಿರ್ಮಿಸಲಾದ “ಕಲಿಕಾ ಕುಟೀರ” ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣ ಕೆದ್ಲಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲಾ ಸಹಶಿಕ್ಷಕಿ ವಿಜಯಾ ಆರ್ ರಚಿಸಿದ ಕವನ ಸಂಕಲನ “ಭೂಮಿಕಾ” ಇದರ ಬಿಡುಗಡೆ ಕಾರ್ಯಕ್ರಮ ನಡೆಯಿತು. ಉದ್ಯಮಿಗಳು, ದಾನಿಗಳೂ ಅದ ಜಿ. ಪ್ರಸಾದ್ ಕಾಂಚನ್ ಶಿರಿಯಾರ ಕವನ ಸಂಕಲನವನ್ನು ಬಿಡುಗಡೆ ಮಾಡಿದರು.
ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಯೋಗ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ಎಲ್ಲಾ ರಿಕ್ಷಾ ಚಾಲಕರನ್ನು ಗೌರವಿಸಲಾಯಿತು. ಅಡುಗೆ ಹಬ್ಬ’ ಕಾರ್ಯಕ್ರಮದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಂದಾಪುರ ಶಾಖಾ ಅಧ್ಯಕ್ಷರಾದ ಗಣೇಶ ಕುಮಾರ ಶೆಟ್ಟಿ, ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸಂತೋಷ ಶೆಟ್ಟಿ, ಸ್ಥಳೀಯ ದಾನಿಗಳಾದ ಕೊರಗಯ್ಯ ಶೆಟ್ಟಿ, ಕೊರ್ಗಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ರಾಘವೇಂದ್ರ ಶೆಟ್ಟಿ, ಅಶೋಕ ಮೊಗವೀರ, ಪಲ್ಲವಿ , ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ವಿನುತಾ ಶೆಟ್ಟಿ, ಮಾಜಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಆದರ್ಶ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರಾದ ಸಂಜೀವ ಎಂ, ಸಹಶಿಕ್ಷಕರಾದ ಜಯರಾಮ ಶೆಟ್ಟಿ, ವಿಜಯಾ ಆರ್, ರವೀಂದ್ರ ನಾಯಕ್, ಗೌರವ ಶಿಕ್ಷಕಿ ಮಧುರಾ, ಶಾಲಾ ವಿದ್ಯಾರ್ಥಿ ನಾಯಕಿ ತ್ರಿಷಾ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ್ ಸ್ವಾಗತಿಸಿದರು. ಸಹ ಶಿಕ್ಷಕ ವಿಜಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಲಕ್ಷ್ಮಿ ಬಿ ವಂದಿಸಿದರು. ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.











