ಕೋಟ – ಉಚಿತ ನೇತ್ರ ತಪಾಸಣೆ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಹಾಗೂ ನೇತ್ರ ನೊಂದಣಿ ಶಿಬಿರ

0
630

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಉಡುಪಿ, ನೇತ್ರಜ್ಯೋತಿ ಚಾರಿಟಬಲ್ ಟ್ರಸ್ಟ್ ಉಡುಪಿ, ಕೋಟ ಸಹಕಾರಿ ವ್ಯವಸಾಯಕ ಸಂಘ ನಿ., ಕೋಟ ಮತ್ತು ನವೋದಯ ಫ್ರೆಂಡ್ಸ್ ಹರ್ತಟ್ಟು ಗಿಳಿಯಾರು, ಕೋಟ, ಇವರುಗಳ ಜಂಟಿ ಆಶ್ರಯದಲ್ಲಿ ಮೇ.3ರಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ಪ್ರಧಾನ ಕಛೇರಿಯಲ್ಲಿ ಉಚಿತ ನೇತ್ರ ತಪಾಸಣೆ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಹಾಗೂ ನೇತ್ರ ನೊಂದಣಿ ಶಿಬಿರವು ನೆರವೇರಿತು.

ಸಭೆಯನ್ನು ಪ್ರಸಾದ್ ನೇತ್ರಾಲಯದ ವ್ಯದ್ಯೆ ಡಾ.ನಿಯೋಮಿ ಉದ್ಘಾಟಿಸಿದರು.

Click Here

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಅಧ್ಯಕ್ಷ ಜಿ ತಿಮ್ಮ ಪೂಜಾರಿಯವರು ಮಾತಾಡಿ ಸ್ಥಳೀಯ ಜನರ ಕಣ್ಣಿನ ಆರೋಗ್ಯದ ಬಗ್ಗೆ ಈ ರೀತಿಯ ಶಿಬಿರಗಳು ನಡೆಯುವುದು ಅಗತ್ಯವಾಗಿದೆ. ಇಂತಹ ಶಿಬಿರಗಳಿಂದ ನೇತ್ರದಾನದಂತಹ ಪುಣ್ಯದ ಕೆಲಸಕ್ಕೆ ಪ್ರೋತ್ಸಾಹ ದೊರೆತು ಅನೇಕರ ಬಾಳಲ್ಲಿ ಬೆಳಕನ್ನು ಚೆಲ್ಲುವ ಅರ್ಥಗರ್ಭಿತ ಕಾರ್ಯಕ್ರಮ ಇದಾಗಿದೆ ಎಂದರು. ಈ ಸಂದರ್ಭ ನವೋದಯ ಫ್ರೆಂಡ್ಸ್ ಹರ್ತಟ್ಟು ಗಿಳಿಯಾರು ಅಧ್ಯಕ್ಷ ಮಹೇಶ್, ಕೋಟ ಸಹಕಾರಿ ವ್ಯವಸಾಯಕ ಸಂಘ ನಿ., ಕೋಟ ಇದರ ನಿರ್ದೇಶಕ ಟಿ ಮಂಜುನಾಥ್, ಪ್ರಸಾದ್ ನೇತ್ರಾಲಯದ ಸಂಪರ್ಕಾಧಿಕಾರಿ ಕಾರ್ತಿಕ್ ಉಪಸ್ಥಿತರಿದ್ದರು.

ಶಿಬಿರದಲ್ಲಿ ಸುಮಾರು 150ಕ್ಕೂ ಮಿಕ್ಕಿ ಜನರ ನೇತ್ರ ತಪಾಸಣೆ ನಡೆಸಿ, ಸುಮಾರು 50ಕ್ಕು ಮಿಕ್ಕಿ ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯ್ತು. ಅಗತ್ಯವಿರುವವರಿಗೆ ರಿಯಾಯ್ತಿ ದರದಲ್ಲಿ ಕನ್ನಡಕವನ್ನು ನೀಡುವ ವ್ಯವಸ್ಥೆ ಮಾಡಲಾಗಿದ್ದು, ಅನೇಕ ಜನರು ಈ ಪ್ರಯೋಜನವನ್ನು ಪಡಕೊಂಡರು. ಹಾಗೆಯೇ ಅನೇಕರು ನೇತ್ರದಾನದ ನೊಂದಣಿಯನ್ನು ಮಾಡಿದರು. ಸಂಘದ ನಿರ್ದೇಶಕ ಎಚ್ ನಾಗರಾಜ ಹಂದೆ ಸ್ವಾಗತಿಸಿದರು. ಸಂಘದ ಸಿಇಒ ಶರತ್ ಕುಮಾರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.ಸಂಘದ ಸಿಬ್ಬಂದಿ ಶಾಲಿನಿ ಹಂದೆ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here