ಮಣೂರು-ಮಳಲುತಾಯಿ ದೇವಳದ ನೂತನ ದೇವಾಲದ ಲೋಕಾರ್ಪಣೆ ಅದ್ಧೂರಿಯ ಹೊರೆಕಾಣಿಕೆ ಸಮರ್ಪಣೆ

0
703

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಕಾರಣಿಕ ಕ್ಷೇತ್ರ ಮಣೂರು ಶ್ರೀ ಮಳಲುತಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ನಿಮಿತ್ತ ಪುನರ್ ಪ್ರತಿಷ್ಠೆ ನೂತನ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಸನಿಹದ ಮಣೂರು ಕಂಬಳಗದ್ದೆಬೆಟ್ಟು ಪರಿಸರದಿಂದ ಬೃಹತ್ ಹೊರೆಕಾಣಿಕೆ ಸಮರ್ಪಣೆ ಸೋಮವಾರ ಜರಗಿತು.

Click Here

ಮಣೂರು ಕಂಬಳಗದ್ದೆಬೆಟ್ಟು ನಾಗದೇವಳದಿಂದ ಆರಂಭಗೊಂಡ ಮೆರವಣಿಗೆ ಕೀಲುಕುದುರೆ,ವಿವಿಧ ಬಗೆಯ ವೇಷಭೂಷಣಗಳ ಹೊಂದಿರುವ ತಟ್ಟಿರಾಯ,ಕೇರಳ ಮಾದರಿಯ ಚಂಡೆಯ ಕರತಾಳನ,ಪುಟಣಿ ಭಜನಾ ತಂಡಗಳ ನೃರ್ತನ,ಸಿಡಿಮದ್ಧು ಪ್ರದರ್ಶನದ ನಡುವೆ ದೇವಳಕ್ಕೆ ಆಗಮಿಸಿತು. ಶ್ರೀ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಆರ್ ಶೆಟ್ಟಿ ಹಾಗೂ ಸಮಿತಿ ಸದಸ್ಯರು ಹೊರೆಕಾಣಿಕೆಯನ್ನು ಬರಮಾಡಿಕೊಂಡರು.ದೇವಳದ ಕೈಂಕರ್ಯದಲ್ಲಿ ತೋಡಗಿಕೊಂಡ ಎಂ.ಎಸ್ ಸಂಜೀವ,ಕಂಬಳಗದ್ದೆ ಮನೆತನದ ಡಾ ಜೀತೇಂದ್ರ ಶೆಟ್ಟಿ,ಸುರೇಶ್ ಶೆಟ್ಟಿ,ವಿಜಯ್ ಕುಮಾರ್ ಶೆಟ್ಟಿ,ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ಮಹೇಶ್ ಶೆಟ್ಟಿ,ಪ್ರಶಾಂತ್ ಶೆಟ್ಟಿ ,ಮಹೇಶ್ ಗುರುಕಾರ, ಸುರೇಶ್ ಪೂಜಾರಿ,ರಾಜೇಶ್ ಕಂಬಳಗದ್ದೆ,ಉದಯ ಪೂಜಾರಿ,ಶಿವರಾಮ ಶೆಟ್ಟಿ,ಶೇಖರ್ ಕಾಂಚನ್,ರಾಘವೇಂದ್ರ ಪೂಜಾರಿ, ಮತ್ತಿತರರ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here