ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಾಸ್ತಾನ ಸೈಂಟ್ ಥೋಮಸ್‍ರ ಹೆಸರಿನಲ್ಲಿ ಪ್ರಸಿದ್ದಿ ಹೊಂದಿದ ಬ್ರಹ್ಮಾವರ ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಸಾಸ್ತಾನ ಸೈಂಟ್ ಥೋಮಸ್ ಓರ್ಥೋಡೊಕ್ಸ್ ಸಿರಿಯನ್ ಇಗರ್ಜಿಯ ನವೀಕೃತ ದೇವಾಲಯದ ಪವಿತ್ರೀಕರಣ ಹಾಗೂ ಉದ್ಘಾಟನಾ ಸಮಾರಂಭ ಸೋಮವಾರ ಸಂಜೆ ಜರುಗಿತು.

ಮಲಂಕರ ಓರ್ಥೋಡೊಕ್ಸ್ ಸಿರಿಯನ್ ಸಭೆಯ
ಪರಮಾಧ್ಯಕ್ಷ ಪರಮಪೂಜ್ಯ ಬಸೇಲಿಯೋಸ್
ಮಾರ್ಥೋಮಾ ಮ್ಯಾಥ್ಯೂಸ್ ತೃತೀಯ ಮತ್ತು ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾಗಿರುವ ಯಾಕೋಬ್ ಮಾರ್ ಏಲಿಯಾಸ್, ಕೊಚ್ಚಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಯಾಕೋಬ್ ಮಾರ್ ಐರೆನಿಯಸ್, ಅಹ್ಮದಾಬಾದ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಗೀವರ್ಗೀಸ್ ಮಾರ್ ಯುಲಿಯೊಸ್ ಇವರ ನೇತೃತ್ವದಲ್ಲಿ ನವೀಕೃತ ದೇವಾಲಯವನ್ನು ಉದ್ಘಾಟಿಸಿದರು.
ಮಲಂಕರ ಓರ್ಥೋಡೊಕ್ಸ್ ಸಿರಿಯನ್ ಸಭೆಯ
ಪರಮಾಧ್ಯಕ್ಷ ಪರಮಪೂಜ್ಯ ಬಸೇಲಿಯೋಸ್ ಆಶೀವಾಚನ ನೀಡಿ ಈ ಸಾಸ್ತಾನ ಪ್ರದೇಶದಲ್ಲಿ ಅತೀ ಸುಂದರವಾದ ದೇವಾಲಯವನ್ನು ನಿರ್ಮಾಣ ಮಾಡಲಿಕ್ಕೆ ಸಾಧ್ಯವಾಯಿತ್ತೆಂದರೆ ದೇವರ ದೊಡ್ಡ ಕೃಪೆಯ ಸೂಚನೆಯಾಗಿದೆ. ದೇವಾಲಯವನ್ನು ನಿರ್ಮಾಣ ಮಾಡಲಿಕ್ಕೆ ದೇವರು ಕೊಡುವಂತಹ ಅವಕಾಶವೂ ಹಾಗೂ ಪ್ರತ್ಯೇಕವಾದ ಪ್ರೀತಿಯ ಸಂಕೇತವಾಗಿದೆ. ಈ ದೇವಾಲಯದ ಕಟ್ಟಡವನ್ನು ಶುಧ್ಧಿಕರಿಸಿ, ಪವಿತ್ರೀಕರಿಸಿದ ಮುಖಾಂತರವಾಗಿ ದೇವಾಲಯವು ಸಭೆಯ ಒಂದು ಭಾಗವಾಗಿ ಮಾರ್ಪಡುತ್ತದೆ. ದೇವಾಲಯವು ಸಕಲ ಜಾತಿಯವರಿಗೂ, ಸಕಲ ಧರ್ಮದವರಿಗೂ ಪ್ರಾರ್ಥನಾಲಯ ಎಂಬುದಾಗಿ ಕೇಳಲ್ಪಡುವುದರಿಂದ ಯಾವುದೇ ಧರ್ಮದವರಿಗೂ ಬೇಕಾದರೆ ಸಹ ಯಾವ ಸಂದರ್ಭದಲ್ಲಿಯೂ ದೇವಾಲಯದಲ್ಲಿ ಬಂದು ಪ್ರಾಥನೆಯನ್ನು ಮಾಡಬಹುದು ಎಂದರು.
ಮಲಂಕರ ಓರ್ಥೋಡೊಕ್ಸ್ ಸಿರಿಯನ್ ಸಭೆಯ
ಪರಮಾಧ್ಯಕ್ಷ ಪರಮಪೂಜ್ಯ ಬಸೇಲಿಯೋಸ್ ಇಗರ್ಜಿಯ ಕೀಯನ್ನು ಚರ್ಚಿನ ಧರ್ಮಗುರುಗಳಾದ ಫಾ. ನೋಯೆಲ್ ಅವರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಸಂಧ್ಯಾ ಪ್ರಾರ್ಥನೆ ಹಾಗೂ ಇಗರ್ಜಿಯ ಪವಿತ್ರೀಕರಣ ನಡಯಿತು.
ಈ ಸಂದರ್ಭದಲ್ಲಿ ಪ್ರಧಾನ ಧರ್ಮಗುರು ಫಾ. ಎಂ.ಸಿ
ಮತೈ, ಧರ್ಮಗುರು ಫಾ.ನೋಯೆಲ್ ಲೂಯಿಸ್,
ಆಡಳಿತ ಮಂಡಳಿಯ ಕಾರ್ಯದರ್ಶಿ ಮಿಲ್ಟನ್ ಅಲ್ಮೇಡಾ, ಕೋಶಾಕಾರಿ ಲೋರೆನ್ಸ ಡಿ ಅಲ್ಮೇಡಾ, ಜೀರ್ಣೋದ್ಧಾರ ಸಮಿತಿಯ ಕನವೆನರ್ ಮೊಸೆಸ್ ರೋಡಿಗ್ರಸ್, ಕಾರ್ಯದರ್ಶಿ ರಾಬರ್ಟ್ ರೋಡಿಗ್ರಸ್, ಕೋಶಾಧಿಕಾರಿ ಜೆರೋಮ್ ರೋಡಿಗ್ರಸ್,ವಿವಿಧ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
ಬ್ರಹ್ಮಾವರದ ಸೈಂಟ್ ಮೇರೀಸ್ ಓರ್ಥೋಡೊಕ್ಸ್ ಸೀರಿಯನ್ ಕ್ಯಾಥಡ್ರಲ್ ಯಿಂದ ಸಾಸ್ತನ ಇಗರ್ಜಿಯ ತನಕ ಬೃಹತ್ ಸ್ವಾಗತ ಮೆರವಣಿಗೆ ನಡೆಯಿತು.











