ಕುಂದಾಪುರ ಮಿರರ್ ಸುದ್ದಿ…
ಕೋಟ: ವಡ್ಡರ್ಸೆ ಗ್ರಾಮ ಪಂಚಾಯತನ ಸಾಮಾನ್ಯ ಕ್ಷೇತ್ರದಿಂದ ಪ್ರಥಮ ಬಾರಿಗೆ ಚುನಾಯಿತರಾಗಿ ಆಯ್ಕೆ ಯಾದ ರಮ್ಯ ಮುಂದಿನ15 ತಿಂಗಳುಗಳ ಅವಧಿಗೆ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 17 ಸದಸ್ಯರನ್ನು ಹೊಂದಿರುವ ಪಂಚಾಯತ್‍ನಲ್ಲಿ ಬಿಜೆಪಿ 14, ಕಾಂಗ್ರೆಸ್ 3 ಸದಸ್ಯರನ್ನು ಹೊಂದಿದ್ದು ನಿರ್ಗಮನದ ಅಧ್ಯಕ್ಷೆ ಸವಿತಾ ಆಚಾರ್ಯ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ಕೋಟ ಪಶು ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ಶೆಟ್ಟಿ, ಪಿಡಿಒ ಉಮೇಶ ಮರಕಾಲ,ಉಪಾಧ್ಯಕ್ಷ ಕಾವಡಿ ಕುಶಲ ಶೆಟ್ಟಿ ಕೋಟ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್ ಐರೋಡಿ, ಬಿಜೆಪಿ ಸ್ಥಳೀಯ ಮುಖಂಡರುಗಳಾದ ಅಜಿತ್ ಶೆಟ್ಟಿ ಕೊತ್ತಾಡಿ, ವಕೀಲ ರಾಜು ಶ್ರೀಯಾನ ವಡ್ಡರ್ಸೆ, ಹಿರಿಯ ಗ್ರಾಮ ಪಂಚಾಯತ ಸದಸ್ಯ ಅಚ್ಲಾಡಿ ಚಂದ್ರಶೇಖರ ಶೆಟ್ಟಿ,
ದಯಾನಂದ ಆಚಾರ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಅಕಾಶ ಆಚಾರ ಮಧುವನ, ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.











