ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಘಟಕದ ವತಿಯಿಂದ ಕೋಟ ಗ್ರಾ.ಪಂ ವ್ಯಾಪ್ತಿಯ ಹಾಡಿಕೆರೆಯ ಬಡ ವಿದ್ಯಾರ್ಥಿಯನ್ನು ಶೈಕ್ಷಣಿಕ ದತ್ತು ಪಡೆದಿದ್ದು ವಿದ್ಯಾರ್ಥಿ ಪ್ರತೀಕ ಪೂರ್ಣ ಖರ್ಚಿನ ಭಾಗವಾಗಿ ಶಾಲಾ ಪರಿಕರ, ಉಡುಪುಗಳನ್ನು ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಮೂಲಕ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಅಮೃತೇಶ್ವರ ದೇವಳದ ಗಣೇಶ್ ಹೊಳ್ಳ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ,ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ ಅಶೋಕ್,ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಗೌರವ ಸಲಹೆಗಾರ ಉಮೇಶ್ ಪ್ರಭು,ಚಂದ್ರ ಪೂಜಾರಿ ಕದ್ರಿಕಟ್ಟು, ಉಪಾಧ್ಯಕ್ಷ ಮನೋಹರ ಪೂಜಾರಿ,ಕಾರ್ಯಾಧ್ಯಕ್ಷ ರವೀಂದ್ರ ಕೋಟ, ಸದಸ್ಯ ಸುಧೀರ್ ಕೊಯ್ಕೂರು ಮತ್ತಿತರರು ಉಪಸ್ಥಿತರಿದ್ದರು.











