ಮೃತ ಶಿಲ್ಪಾ ಮನೆಗೆ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಭೇಟಿ

0
504

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಅಖಿಲ ಭಾರತೀಯ ಸಂತ ಸಮಿತಿ ಪ್ರದೇಶ ಪ್ರಮುಖ್, ಓಂ ಶ್ರೀ ಮಠ ಮಂಗಳೂರು ಇಲ್ಲಿನ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಅವರು ಲವ್ ಜಿಹಾದ್‍ಗೆ ಬಲಿಯಾಗಿದ್ದಾಳೆ ಎನ್ನಲಾದ  ಶಿಲ್ಪಾ ದೇವಾಡಿಗ ಮನೆಗೆ ಭೇಟಿ ನೀಡಿ ಮೃತ ಶಿಲ್ಪಾಳ ತಂದೆ-ತಾಯಿಗೆ ಸಾಂತ್ವಾನ ಹೇಳಿದರು.
ಈ ಸಂದರ್ಭ ಶಿಲ್ಪ ಕುಟುಂಬ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಇದು ಬಹುಸಂಖ್ಯಾತ ಹಿಂದೂ ಸಮಾಜವನ್ನು ಅಲ್ಪ ಸಂಖ್ಯಾತರನ್ನಾಗಿಸಿ ಮಾಡುವ ಉದ್ದೇಶದಿಂದ ನಡೆಸುವ ಕೃತ್ಯವಾಗಿದೆ. ಈ ಪ್ರಕರಣದ ಆರೋಪಿಗೆ  ರಾಷ್ಟ್ರದ್ರೋಹ ಅಪರಾಧದ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಯಾಗುವಂತೆ ಮಾತನಾಡಿದ್ದೇವೆ. ಈ ಪ್ರಕರಣದಿಂದ ಯಾವುದೇ ಆಮಿಷ, ಒತ್ತಡ ಬಂದರೂ ಕೂಡಾ ಹಿಂದೆ ಸರಿಯಬೇಡಿ. ಅಪರಾಧಿಗೆ ಕಠಿಣ ಶಿಕ್ಷೆಯಾದರೆ ಮಾತ್ರ ಮೃತ ಶಿಲ್ಪಳ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.
ಒಂದು ಹೆಣ್ಣು ಮಗು ಎಂದರೆ ಒಂದು ಪರಂಪರೆ. ಒಂದು ಪರಂಪರೆಯೆ ಕಳಚಿದಂತಾಗಿದೆ. ಅನ್ಯಮತೀಯರ ಇಂತಹ ಕೃತ್ಯಗಳ ಬಗ್ಗೆ  ಹಿಂದು ಸಮಾಜದ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಬೇಕು. ಪ್ರಾರಂಭದಲ್ಲಿ ತಿದ್ದಿ ಸರಿ ದಾರಿಗೆ ತರಬೇಕು. ಈ ಬಗ್ಗೆ ವಿಹಿಂಪ, ಬಜರಂಗದಳ ಹಾಗೂ ಸಮಸ್ತ ಹಿಂದೂ ಸಂಘಟನೆಗಳು ಜಾಗರೂಕವಾಗಿದ್ದುಕೊಂಡು ಸೂಕ್ಷ್ಮವಾಗಿ ಗಮನಿಸುತ್ತಿರುತ್ತವೆ. ಏನೇ ಒತ್ತಡ ಬಂದರೂ ಕೂಡಾ ನಮ್ಮ ಮಠದ ಗಮನಕ್ಕೆ ತನ್ನಿ, ನಿಮ್ಮ ನೋವಿನಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಇದೆ ಎಂದರು.
ಈ ಸಂದರ್ಭದಲ್ಲಿ ಓಂ ಶ್ರೀ ಮಠದ ಮಾತಾಶ್ರೀ ಶಿವಜ್ಞಾನ ಮಹೀ ಸರಸ್ವತಿ, ಸ್ವಾಮಿ ಶ್ರೀ ಸಾಯಿ ಈಶ್ವರ್ ದ್ವಾರಕಾ ಮಹಿ ಮಠ ಶಂಕರಪುರ ಉಡುಪಿ, ವಿಹಿಂಪ ಮುಖಂಡರಾದ ಪ್ರೇಮಾನಂದ ಶೆಟ್ಟಿ ಕಟ್ಕೆರೆ ಮೊದಲಾದವರು ಉಪಸ್ಥಿತರಿದ್ದರು.
Click Here

LEAVE A REPLY

Please enter your comment!
Please enter your name here