ಪಂಚವರ್ಣ ಯುವಕ ಮಂಡಲದ ವತಿಯಿಂದ ಪರಿಸರ ಜಾಗೃತಿ ಮಾಹಿತಿ ಕಾರ್ಯಾಗಾರ ಆಯೋಜನೆ

0
509

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಇದರ ಅಧೀನಕ್ಕೊಳಪಟ್ಟ ಮಹಿಳಾ ಮಂಡಲದ ನೇತ್ರತ್ವದಲ್ಲಿ ಬೆಳ್ಳಿ ಹಬ್ಬದ ಅಂಗವಾಗಿ ಗೀತಾನಂದ ಫೌಂಡೇಶನ್ ಮಣೂರು,ಗಿಳಿಯಾರು ಯುವಕ ಮಂಡಲ,ಮಣೂರು ಫ್ರೆಂಡ್ಸ್,ಯಕ್ಷಸೌರಭ ಕಲಾರಂಗ ಕೋಟ,ಹಂದಟ್ಟು ಮಹಿಳಾ ಬಳಗ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ,ಗೆಳೆಯರ ಬಳಗ ಕಾರ್ಕಡ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪರಿಸರಸ್ನೇಹಿ ಸರಣಿ ಮಾಹಿತಿ ಕಾರ್ಯಗಾರ ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಇಲ್ಲಿನ ನಡೆಯಲಿದೆ.

ಕೋಟ ಸುತ್ತಮುತ್ತಲಿನ ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ವಲಯವಾಗಿಸಿ,ಗೀತಾನಂದ ಫೌಂಡೇಶನ್ ಕೊಡಮಾಡಿದ ಸಹಸ್ರ ಗಿಡ ನೆಡುವ ಸಂಕಲ್ಪವನ್ನು ಕಳೆದ ಮೂರು ವರ್ಷಗಳಿಂದ ಸಾಕಾರಗೊಳಿಸಿ ಇದೀಗ ಪ್ರಾಥಮಿಕ ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವವಣೆ ಮತ್ತು ಬಳಕೆ ಹಾಗೂ ಪರಿಸವನ್ನು ಹಸಿರು ಕ್ರಾಂತಿಗೊಳಿಸುವ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಿದೆ.

Click Here

ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಮಣೂರು ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಲಿದ್ದು,ಸಂಪನ್ಮೂಲ ವ್ಯಕ್ತಿಯಾಗಿ ಪರಿಸರವಾದಿ ಸಮಾಜಸೇವ ಹ.ರಾ ವಿನಯಚಂದ್ರ ಸಾಸ್ತಾನ ಭಾಗವಹಿಸಲಿದ್ದಾರೆ.

ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ವಹಿಸಲಿದ್ದು ,ಶಾಲಾ ಮುಖ್ಯ ಶಿಕ್ಷಕಿ ಪುಷ್ಭಾವತಿ ಹೊಳ್ಳ, ಕೋಟ ಗ್ರಾಮಚಾಯತ್‍ಅಧ್ಯಕ್ಷ ಅಜಿತ್ ದೇವಾಡಿಗ,ಪಂಚವರ್ಣದ ಸ್ಥಾಪಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್,ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ ಅಶೋಕ್ ಉಪಸ್ಥಿತರಿದ್ದರು ಎಂದು ಸಂಘಟಕರು ತಿಳಿಸಿದ್ದಾರೆ.

 

Click Here

LEAVE A REPLY

Please enter your comment!
Please enter your name here