ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣ ಗುರು ಯುವಕ ಮಂಡಲ ಕುಂದಾಪುರ, ಭಾರತೀಯ ರೆಡ್‍ಕ್ರಾಸ್‍ನ ರಕ್ತನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಸ್ವಯಂ ಪ್ರೇರಿತ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ರವಿವಾರ ನಡೆಯಿತು.
ಉದ್ಘಾಟಿಸಿದ ರೆಡ್‍ಕ್ರಾಸ್ ಕುಂದಾಪುರ ಘಟಕದ ಅಧ್ಯಕ್ಷ ಎಸ್. ಜಯಕರ ಶೆಟ್ಟಿ ಮಾತನಾಡಿ, ಕುಂದಾಪುರದಲ್ಲಿನ ರಕ್ತನಿಧಿ ಕೇಂದ್ರಕ್ಕೆ ತಿಂಗಳಿಗೆ ಸಾಕಷ್ಟು ಖರ್ಚು ವೆಚ್ಚಗಳಿದ್ದು, ಆದರೆ ಇದ್ಯಾವುದನ್ನು ಸರಕಾರ ಭರಿಸುವುದಿಲ್ಲ. ರೆಡ್‍ಕ್ರಾಸ್ ಸಂಸ್ಥೆಯೇ ಭರಿಸುತ್ತಿದೆ. ಈ ಬಗ್ಗೆ ಸರಕಾರಕ್ಕೆ ಜನಪ್ರತಿನಿಧಿಗಳ ಮೂಲಕ ಅನೇಕ ಬಾರಿ ಮನವಿ ಮಾಡಿದ್ದರೂ, ಯಾವುದೇ ಅನುದಾನ, ಅನುಕಂಪವಾಗಲಿ ಬಂದಿಲ್ಲ ಎಂದ ಅವರು, ರಕ್ತದಾನದ ಬಗೆಗಿನ ಅರಿವು, ಕಾಳಜಿ ಎಲ್ಲೆಡೆಗಳಲ್ಲಿ ಇನ್ನಷ್ಟು ಹೆಚ್ಚಾಗಬೇಕಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ನಮ್ಮ ಯುವಕ ಮಂಡಲವು ಬಹಳಷ್ಟು ವರ್ಷಗಳ ಹಿಂದೆಯೇ ಗರಿಷ್ಠ ಪ್ರಮಾಣದಲ್ಲಿ ರಕ್ತದಾನ ಮಾಡುವ ಮೂಲಕ ಮೆಚ್ಚುಗೆ ಗಳಿಸಿತ್ತು. ಈಗಲೂ ಅದೇ ಕೈಂಕರ್ಯವನ್ನು ಮುಂದುವರಿಸಿಕೊಂಡು ಬರುತ್ತಿದೆ. ಡಾ| ಜಿ. ಶಂಕರ್ ಅವರು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮೂಲಕ ಸಾಕಷ್ಟು ರಕ್ತದಾನ ಶಿಬಿgನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯಾದ್ಯಂತ ರಕ್ತದಾನದ ಬಗೆಗಿನ ಅನೇಕ ಗೊಂದಲ ನಿವಾರಣೆಯಾಗಿದೆ ಎಂದರು.
ಆಹಾರ ಸುರಕ್ಷಿತ ಮತ್ತು ಗುಣಮಟ್ಟ ಪ್ರಾ„ಕಾರದ ಅಂಕಿತ ಅಧಿಕಾರಿ ಡಾ| ಪ್ರೇಮಾನಂದ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ಶ್ರೀ ನಾರಾಯಣ ಗುರು ಸಾಂಸ್ಕೃತಿಕ ಮತ್ತು ದತ್ತಿ ಸಂಸ್ಥೆಯ ಪ್ರ. ಕಾರ್ಯದರ್ಶಿ ಭಾಸ್ಕರ ವಿಠಲವಾಡಿ, ಶ್ರೀ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಅಜಿತ್ ಪೂಜಾರಿ, ಪ್ರ. ಕಾರ್ಯದರ್ಶಿ ಬಸವ ಪೂಜಾರಿ, ಕೋಶಾ„ಕಾರಿ ಸುನೀಲ್ ಪೂಜಾರಿ, ಪದಾಧಿಕಾರಿಗಳು, ಸದಸ್ಯರು, ಉಪಸ್ಥಿತರಿದ್ದರು.
ಈ ರಕ್ತದಾನ ಶಿಬಿರದಲ್ಲಿ ಒಟ್ಟು 57 ಯೂನಿಟ್ ಸಂಗ್ರಹವಾಗಿದ್ದು, ಅದನ್ನು ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.
ರಾಜೇಶ್ ಕಡ್ಗಿಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಜಿತ್ ವಂದಿಸಿದರು.
ಸಮ್ಮಾನ
ಕೆಲ ದಿನಗಳ ಹಿಂದೆ ಕೋಟೇಶ್ವರ ಸಮೀಪ ಬೆಳಗಿನ ಜಾವ ಸುಮಾರು 3.30 ರ ವೇಳೆಗೆ ಕಳ್ಳತನ ನಡೆಯುತ್ತಿದ್ದುದನ್ನು ಕಂಡು, ಕಳ್ಳರ ಬೆದರಿಕೆ ನಡುವೆಯೂ ಅಂಜದೆ, ಧೈರ್ಯದಿಂದ ಅಕ್ಕ-ಪಕ್ಕದವರಿಗೆಲ್ಲ ಮಾಹಿತಿ ತಿಳಿಸಿ, ಸಮಯ್ರಜ್ಞೆ ಮೆರೆದ ಬೀಜಾಡಿ ಗ್ರಾಮದ ಆನಂದ ಪೂಜಾರಿ ಮತ್ತು ಜಯಂತಿ ದಂಪತಿಯ ಪುತ್ರ, ಪತ್ರಿಕೆ ಹಂಚುವ ಹುಡುಗ, ಕಾಲೇಜು ವಿದ್ಯಾರ್ಥಿ ಅಜಯ್ ಪೂಜಾರಿ ಅವರನ್ನು ಈ ವೇಳೆ ಸಮ್ಮಾನಿಸಲಾಯಿತು.











