ಗುಂಡ್ಮಿ- ಸರಕಾರ ಯಕ್ಷಗಾನದ ಕುರಿತು ಸಾಂಸ್ಕೃತಿಕ ನೀತಿ ರೂಪಿಸಲಿ- ಗೋಪಾಲಕೃಷ್ಣ ನಾಯರಿ

0
465

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಯಕ್ಷಗಾನದ ಕುರಿತು ಸರಕಾರ ಸಾಂಸ್ಕೃತಿಕ ನೀತಿ ರೂಪಿಸಬೇಕು ಎಂದು ಅಂತರಾಷ್ಟ್ರೀಯ ಖ್ಯಾತಿಯ ದೇಶೀಯ ರಂಗಕರ್ಮಿ ಗೋಪಾಕೃಷ್ಣ ನಾಯರಿ ಹೇಳಿದ್ದಾರೆ.

ಭಾನುವಾರ ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಪಂಚವರ್ಣ ಯುವಕ ಮಂಡಲದ ಪ್ರಾಯೋಜಕತ್ವದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಡುಪಿ ಸಹಕಾರದೊಂದಿಗೆ ಯಕ್ಷ ಮಹಿಳಾ ಬಳಗ ಕೋಟ ಇವರ ಯಕ್ಷಾ ವರ್ಷಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಪ್ರಸ್ತುತ ಯಕ್ಷಗಾನ ವಿಶ್ವಗಾನವಾಗಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ಕಲೆ ಅಂತಹ ಕಲೆಗೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುವುದರ ಜೊತೆಗೆ ಮಹತ್ವದ ಸ್ಥಾನ ನೀಡಬೇಕು.

ಪ್ರಸ್ತುತ ಉಳಿದಿರುವ ಕಲೆಗಳಲ್ಲಿ ಯಕ್ಷಗಾನ ತನ್ನದೆ ಆದ ಗುಣಮಟ್ಟವನ್ನು ಕಾಯ್ದುಕೊಂಡು ಕಲಾರಾಧನೆಯೊಂದಿಗೆ ಯುವ ಮನಸ್ಸುಗಳನ್ನು ತನ್ನತ್ತ ಆಕರ್ಷಿಸುತ್ತಿದೆ.ಅದರಲ್ಲೂ ಮಹಿಳಾ ಯಕ್ಷಮಣಿಗಳ ಪಾತ್ರ ಮಹತ್ತರವಾದದ್ದು ಎಂದರಲ್ಲದ
ಪಂಚವರ್ಣ ಯುವಕ ಮಂಡಲವು ಸಾಮಾಜಿಕ ಕೈಂಕರ್ಯದ ಜೊತೆಗೆ ಕಲಾರಾಧನೆನ್ನು ತೋಡಗಿಕೊಂಡಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

Click Here

ಕಾರ್ಯಕ್ರಮವನ್ನು ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಎ ರಾಜಶೇಖರ ಹೆಬ್ಬಾರ್ ,ಯಕ್ಷ ಮಹಿಳಾ ಬಳಗದ ಅಧ್ಯಕ್ಷೆ ಸುಶೀಲಸೋಮಶೇಖರ್,ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ ಶೇವಧಿ ಉಪಸ್ಥಿತರಿದ್ದರು.

ಯಕ್ಷ ಮಹಿಳಾ ಬಳಗದ ಸಂಚಾಲಕಿ ಸುಧಾ ಮಣೂರು ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.ಕಾರ್ಯಕ್ರಮವನ್ನು ಪಂಚವರ್ಣ ಯುವಕ ಮಂಡಲದ ಸದಸ್ಯ ಕಾರ್ತಿಕ್ ಆಚಾರ್ಯ ನಿರೂಪಿಸಿದರೆ, ಯಕ್ಷ ಮಹಿಳಾ ಬಳಗದ ವಸಂತಿ ಉಮೇಶ್ ವಂದಿಸಿದರು.

Click Here

LEAVE A REPLY

Please enter your comment!
Please enter your name here