ವಕ್ವಾಡಿ : ಜನರಿಗೆ ಮೂಲಸೌಕರ್ಯ ನೀಡುವಲ್ಲಿ ಕೋಟೇಶ್ವರ ಸಹಕಾರಿ ಸಂಘದ ಪಾತ್ರ ಶ್ಲಾಘನೀಯ -ಕೆ.ಪ್ರತಾಪಚಂದ್ರ ಶೆಟ್ಟಿ

0
787

Click Here

Click Here

ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ವಕ್ವಾಡಿ ಶಾಖೆ ಉದ್ಘಾಟನೆ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಹಕಾರಿ ಸಂಘಗಳು ರೈತರ ಮೂಲಭೂತ ಅವಶ್ಯಕತೆಗಳನ್ನು ಸಂಸ್ಥೆಯ ಇತಿಮಿತಿಯೊಳಗೆ ಮಾಡಿಕೊಟ್ಟಾಗ ರೈತರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸುತ್ತದೆ. ಗ್ರಾಮ ಪಂಚಾಯತ್‍ಗಳಂತೆ ಸಹಕಾರಿ ಸಂಘಗಳ ಜನರ ಮೂಲಭೂತ ಅವಶ್ಯಕತೆ ಪೂರೈಸುವಲ್ಲಿ ಮುಂದಾಗಿರುವ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ ಕಾರ್ಯ ಶ್ಲಾಘನೀಯವಾದುದು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಕಾಳಾವರ ಗ್ರಾ.ಪಂ.ನ ವಕ್ವಾಡಿಯ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ವಕ್ವಾಡಿ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇವತ್ತು ಶುದ್ಧ ತೆಂಗಿನ ಎಣ್ಣೆಯನ್ನು ಮಾರುಕಟ್ಟೆಯಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಕಲಬೆರಕೆ ರಹಿತವಾದ ಶುದ್ಧ ತೆಂಗಿನ ಎಣ್ಣೆ ಘಟಕಗಳನ್ನು ಸ್ಥಾಪಿಸುವುದು, ಸಹಕಾರ ವ್ಯವಸ್ಥೆಯಡಿ ಅದನ್ನು ಮುಂದುವರಿಸುವ ಚಿಂತನೆಗಳನ್ನು ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ ಬೆಳೆಸಿಕೊಳ್ಳಬೇಕಾಗಿದೆ ಎಂದರು.

Click Here

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಮಹೇಶ್ ಹೆಗ್ಡೆ ಮೊಳಹಳ್ಳಿ ಭದ್ರತಾ ಕೊಠಡಿ ಉದ್ಘಾಟಿಸಿ, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘ 1976ರಲ್ಲಿ ಪ್ರಾರಂಭಗೊಂಡಂದಿನಿಂದ ಉತ್ತಮ ಸೇವೆ ನೀಡುತ್ತಾ ಅತ್ಯುತ್ತಮ ಸಹಕಾರಿ ಸಂಘ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತಮ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶರತ್ ಕುಮಾರ್ ಹೆಗ್ಡೆ ಶಾನಾಡಿ ಅವರು ಮಾತನಾಡಿ, ವಕ್ವಾಡಿಯಲ್ಲಿ ಶಾಖೆ ಆರಂಭಿಸಬೇಕು ಎನ್ನುವ 40 ವರ್ಷಗಳ ಕನಸು ಈವತ್ತು ಈಡೇರುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಡಿಮೆ ಇಲ್ಲವೆನ್ನುವಂತೆ ಇಲ್ಲಿ ಶಾಖಾ ಕಛೇರಿ ಈ ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಲಾವಣ್ಯ ಕೆ.ಆರ್., ಕಾಳಾವರ ಗ್ರಾ.ಪಂ ಅಧ್ಯಕ್ಷೆ, ಸಂಘದ ನಿರ್ದೇಶಕಿ ಆಶಾಲತಾ ಶೆಟ್ಟಿ, ವಕ್ವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ರಾಜೀವ ಶೆಟ್ಟಿ, ಕಾಳಾವರ ಗ್ರಾ.ಪಂಉಪಾಧ್ಯಕ್ಷ ರಾಮಚಂದ್ರ ನಾವಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಉಪಾಧ್ಯಕ್ಷ ವಾದಿರಾಜ ಹತ್ವಾರ ತೆಕ್ಕಟ್ಟೆ, ಸಂಘದ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಪೂಜಾರಿ ಬೀಜಾಡಿ, ಭರತ್ ಕುಮಾರ್ ಶೆಟ್ಟಿ ಕಾಳಾವರ, ಚಂದ್ರಶೇಖರ ಶೆಟ್ಟಿ ಕಾಳಾವರ, ಗೋಪಾಲ ಶೆಟ್ಟಿ ಹೆಚ್.ಕೊರ್ಗಿ, ಮೋಹನದಾಸ ಶೆಟ್ಟಿ ಮಲ್ಯಾಡಿ ತೆಕ್ಕಟ್ಟೆ, ನರಸಿಂಹ ಪೂಜಾರಿ ವಕ್ವಾಡಿ, ನವೀನಕುಮಾರ್ ಹೆಗ್ಡೆ ಶಾನಾಡಿ-ಕೆದೂರು, ಸುರೇಶ ಕೆ.ವಿ., ಕಾಳಾವರ, ಸುಧಾ ಬೀಜಾಡಿ, ಚಿಕ್ಕು ಅಸೋಡು, ವೃತ್ತಿಪರ ನಿರ್ದೇಶಕ ಗೋಪಾಲ ಪೂಜಾರಿ ಕುಂಭಾಶಿ, ವಲಯ ಮೇಲ್ವಿಚಾರಕ ಸಂದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಕಾಳಾವರ ಪ್ರೌಢಶಾಲೆ ವಿದ್ಯಾರ್ಥಿನಿ ನಿಶಾ ಜೋಗಿ ಅವರನ್ನು ಸನ್ಮಾನಿಸಲಾಯಿತು. ಸಂಘದ ವ್ಯಾಪ್ತಿಯಲ್ಲಿ ಆರಂಭಗೊಂಡ ನೂತನ ಸ್ವಸಹಾಯ ಸಂಘಗಳಿಗೆ ದಾಖಲಾತಿ ಪುಸ್ತಕ ಹಸ್ತಾಂತರಿಸಲಾಯಿತು.
ದಿವ್ಯಾ ಪ್ರಾರ್ಥಿಸಿದರು. ನಿರ್ದೇಶಕ ಭರತ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿಶ್ವೇಶ್ವರ ಐತಾಳ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸಂಘದ ವರದಿ ವಾಚಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿ, ರಾಜಶೇಖರ ಶೆಟ್ಟಿ ಕೊರ್ಗಿ ವಂದಿಸಿದರು.

Click Here

LEAVE A REPLY

Please enter your comment!
Please enter your name here