ಕೋಟ ಪಡುಕರೆ- ಗೀತಾನಂದ ಫೌಂಡೇಶನ್ ವತಿಯಿಂದ ಆನಂದೋತ್ಸವ ಆಯೋಜನೆ

0
600

Click Here

Click Here

21 ಶಾಲೆಗಳ 3.5ಸಾವಿರ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಸ್ತಾಂತರ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಕರಾವಳಿಯ ಮಣ್ಣಿನಲ್ಲಿ ಶೈಕ್ಷಣಿಕ ಕಂಪನ್ನು ಪಸರಿಸಿದ ಕೀರ್ತಿ ಆನಂದ್ ಸಿ ಕುಂದರ್ ಗೆ ದಕ್ಕಬೇಕು- ಅಶೋಕ್ ಕಾಮತ್

ಕುಂದಾಪುರ ಮಿರರ್ ಸುದ್ದಿ…
ಕೋಟ: ಕರಾವಳಿಯ ಮಣ್ಣಿಗೆ ಶೈಕ್ಷಣಿಕ ಕಂಪನ್ನು ಆನಂದ್ ಸಿ ಕುಂದರ್ ಪಸರಿಸಿದ್ದಾರೆ ಜೊತೆಗೆ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ನಿಲ್ಲುವಂತೆ ಮಾಡಿರುವುದು ಶ್ಲಾಘನೀಯ ಎಂದು ಉಡುಪಿಯ ಡಯಟ್ ಶಿಕ್ಷಣ ಸಂಸ್ಥೆಯ ಉಪ ಪ್ರಾಂಶುಪಾಲ ಅಶೋಕ ಕಾಮತ್ ಹೇಳಿದರು.

ಕೋಟದ ಮಣೂರು ಪಡುಕರೆ ಗೀತಾನಂದ ಫೌಂಡೇಶನ್ ಮಣೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕೆ.ಸಿ ಕುಂದರ್ ಸ್ಮರಣಾರ್ಥ ಸಹೋದರರ ಸಭಾಂಗಣದಲ್ಲಿ ಆನಂದೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆಗಿನ ಜಿಲ್ಲಾ ಪರಿಷತ್ ಅಧ್ಯಕ್ಷ ಕೆ.ಸಿ ಕುಂದರ್ ಕರಾವಳಿ ಭಾಗದ ಕಡಲ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕನಸನ್ನು ಸಾಕಾರಗೊಳಿಸಿದರು. ಆದರೆ ಅವರ ಸಹೋದರ ಆನಂದ್ ಸಿ ಕುಂದರ್ ಇಲ್ಲಿನ ಎಲ್ಲಾ ಭಾಗಗಳ ಶೈಕ್ಷಣಿಕ ಕಾರ್ಯಕ್ಕೆ ಪುನರ್ಜನ್ಮ ನೀಡುವ ಕೆಲಸ ಮಾಡಿದ್ದಾರೆ ಇದೊಂದು ಪ್ರಶಂಸನೀಯ ಕಾರ್ಯವಾಗಿದೆ. ಒಂದು ಸರಕಾರಿ ಶಾಲೆಯನ್ನು ಈ ಮಟ್ಟದಲ್ಲಿ ಕೊಂಡ್ಯೊಯ್ದ ಕೀರ್ತಿ ಗೀತಾನಂದ ಟ್ರಸ್ಟ್ ಗೆ ಸಲ್ಲಬೇಕಾಗಿದೆ ತಾನು ನೀಡುವ ಸಹಾಯವನ್ನು ಜಿಲ್ಲಾ ವ್ಯಾಪ್ತಿಯ ಹೆಚ್ಚಿನ ಶಾಲೆಗಳಿಗೆ ವಿಸ್ತರಿಸುವ ಮನೋಭಿಲಾಷೆ ಸರ್ವ ಶ್ರೇಷ್ಠವಾದದ್ದು.
ಪ್ರಸ್ತುತ ಶೈಕ್ಷಣಿಕ ಕಾರ್ಯದಲ್ಲಿ ವಿದ್ಯಾರ್ಥಿಗಳು ಮೊಬೈಲ್ ವ್ಯಾಮೋಹದಿಂದ ಹೊರಬರಬೇಕಾದ ಅಗತ್ಯತೆ ಇದೆ ಈ ವಿಚಾರದಲ್ಲಿ ಪೋಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅಗತ್ಯತೆ ಇದೆ ಎಂದು ಮನಗಾಣಿಸಿದರಲ್ಲದೆ ವಿದ್ಯಾರ್ಥಿಗಳು ತಮ್ಮಶೈಕ್ಷಣಿಕ ಬದುಕಿನಲ್ಲಿ ಸಾಧನೆಯ ಮೆಟ್ಟಿಲು ಏರಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಇತ್ತೀಚಿಗೆ ಮಣೂರು ಪಡುಕರೆ ಶಾಲೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶಿಕ್ಷಕಿ ಜಿ.ನಾಗರತ್ನ ರವನ್ನು ಸನ್ಮಾನಿಸಲಾಯಿತು.

Click Here

ಇದೇ ಸಂದರ್ಭದಲ್ಲಿ ಎಸ್‍ ಎಸ್‍ ಎಲ್ ಸಿ ವಿಶಿಷ್ಟ ರೀತಿಯಲ್ಲಿ ತೆರ್ಗಡೆಯಾದ 31ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಲ್ಲಿಸಲಾಯಿತು.

ಒಟ್ಟು ಜಿಲ್ಲೆಯ 22ಶಾಲೆಗಳ 3,500ಸಾವಿರಕ್ಕೂ ಅಧಿಕ ಮಕ್ಕಳಿಗೆ ನೋಟ್ ಬುಕ್ ಅನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಗೀತಾನಂದದ ಪರಿಸರ ಕಾಳಜಿ
ಪ್ರತಿವರ್ಷ ಗೀತಾನಂದ ಟ್ರಸ್ಟ್ ಮೂಲಕ ಆನಂದ್ ಸಿ ಕುಂದರ್ ರವರ ಕನಸಿನ ಯೋಜನೆ ಸಹಸ್ರ ಗಿಡ ನೀಡುವ ಹಸಿರು ಕ್ರಾಂತಿ ಸೃಷ್ಠಿವ ಸದಾಶಯದೊಂದಿಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗಿಡ ನಡುವ ಹಾಗೂ ಆಯಾ ಭಾಗಳ ಸಂಘನೆಗಳಿಗೆ ,ಶಾಲೆಗಳಿಗೆ ಸುಮಾರು 13ಸಾವಿರ ಅಧಿಕ ಗಿಡ ನೀಡುವ ಯೋಜನೆಗೆ ಚಾಲನೆ ನೀಡಲಾಯಿತು. ವಿವಿಧ ಸಂಘಟನೆಗಳ ಮುಖ್ಯಸ್ಥರಿಗೆ ಸಾಂಕೇತಿಕವಾಗಿ ಗಿಡ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಕ್ರಮದ ರೂವಾರಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ವಹಿಸಿ ಪ್ರಾಸ್ತಾವನೆ ಸಲ್ಲಿಸಿ ಸ್ವಾಗತಿಸಿದರು.

ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ಕ್ಷೇತ್ರ ಶಿಕ್ಷಾಣಾಧಿಕಾರಿ ಬಿ.ಟಿ ನಾಯಕ್, ಮನೋವೈದ್ಯ ಡಾ.ಸಿ ಪ್ರಕಾಶ್ ತೋಳಾರ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಲಕ್ಷ್ಮೀ ಸೋಮಬಂಗೇರ ಸ.ಪ್ರ.ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್, ಫ್ರೌಢಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಎಂ ಜಯರಾಮ ಶೆಟ್ಟಿ, ಪ್ರಾಥಮಿಕ ವಿಭಾಗದ ಅಧ್ಯಕ್ಷ ನಾಗರಾಜ, ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಹೆಚ್ ಕುಂದರ್, ಮೊಗವೀರ ಯುವ ಸಂಘದ ಜಿಲ್ಲಾ ಕಾರ್ಯದರ್ಶಿ ರವೀಶ್, ಕೋಟ ಘಟಕದ ಅಧ್ಯಕ್ಷ ಜಯಂತ್ ಅಮೀನ್, ಮಣೂರು ಪಡುಕರೆ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಜಯಂತಿ, ಗೀತಾನಂದ ಟ್ರಸ್ಟ್ ನಿರ್ದೇಶಕಿ ಗೀತಾ ಎ ಕುಂದರ್, ದಿನ್ಯ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್, ಉದ್ಯಮಿ ಪಿ.ಆನಂದ್ ಸುವರ್ಣ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಫ್ರೌಢಶಾಲಾ ವಿಭಾಗದ ಶಿಕ್ಷಕ ಶ್ರೀಧರ ಶಾಸ್ತ್ರಿ ನಿರೂಪಿಸಿದರೆ,ಫ್ರೌಢಶಾಲಾ ಮುಖ್ಯ ಶಿಕ್ಷಕ ನಿರಂಜನ್ ನಾಯಕ್ ವಂದಿಸಿದರು.ಗೀತಾನಂದ ಟ್ರಸ್ಟ್ ನ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ,ಶಿಕ್ಷಕಿ ಅನುಪಮ ಹಂದೆ ಸಹಕರಿಸಿದರು.

Click Here

LEAVE A REPLY

Please enter your comment!
Please enter your name here