ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ಸೇವಾಸಂಗಮ ಶಿಶುಮಂದಿರ ಇಲ್ಲಿಗೆ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇದರ ವತಿಯಿಂದ ಆಟಿಕೆಯನ್ನು ಹಸ್ತಾಂತರಿಸಲಾಯಿತು.
ಇದೇ ಸಂದರ್ಭದಲ್ಲಿ ಆಟಿಕೆಯನ್ನು ಶಿಶುಮಂದಿರದ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ ಇವರಿಗೆ ನೀಡಿದರು.
ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಎ ಕುಂದರ್ ಕಾರ್ಯಕ್ರಮವನ್ನು ಜ್ಯೋತಿ ಉದ್ಘಾಟಿಸಿದರು.
ಶಿಶುಮಂದಿರದ ಸಮಿತಿ ಸದಸ್ಯರಾದ ಸುಶೀಲಸೋಮಶೇಖರ್, ವಸುಧಾ ಪ್ರಭು,ಚಂದ್ರಿಕಾ ಮಯ್ಯ,ಗೋಪಾಲಕೃಷ್ಣ ಭಟ್,ಗೀತಾನಂದ ಪೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ಮತ್ತಿತರರು. ಕಾರ್ಯಕ್ರಮವನ್ನು ಶಿಶುಮಂದಿರದ ಟ್ರಸ್ಟಿ ಭಾಗ್ಯವಾದಿರಾಜ್ ನಿರೂಪಿಸಿದರು.ಟ್ರಟ್ಟಿ ಸುಶ್ಮಾದಯಾನಂದ್ ಹೊಳ್ಳ ವಂದಿಸಿದರು.











