ಸೂಪರ್ ಮಾಡೆಲ್ ಇಂಡಿಯಾ 2022 –  ಸ್ವೀಝಲ್ ಫುರ್ಟಾಡೊ ರನ್ನರ್ ಅಪ್

0
386

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಕರ್ನಾಟಕದ ಉಡುಪಿ ಜಿಲ್ಲೆಯ ಬಾರಕೂರು ಮೂಲದ ಸ್ವೀಝಲ್ ಫುರ್ಟಾಡೊ ರವರು ಸೂಪರ್ ಮಾಡೆಲ್ ಇಂಡಿಯಾ 2022 ರ ರನ್ನರ್ ಅಪ್ ಆಗಿ ಆಯ್ಕೆಗೊಂಡಿದ್ದಾರೆ.

ಸ್ಟಾರ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ ಇವರು ಜೂನ್26 ರಂದು ನವದೆಹಲಿಯ ಲೀಲಾ ಪ್ಯಾಲೇಸ್ ನಲ್ಲಿ ನಡೆಸಿದ ಸ್ಪರ್ಧೆಯಲ್ಲಿ ರೋಹಿತ್ ಖಂಡೆಲ್ ವಾಲ (ಮಿಸ್ಟರ್ ವಲ್ರ್ಡ್ 2016) ಮತ್ತು ಸುಮನ್ ರಾವ್ (ಮಿಸ್ ವಲ್ರ್ಡ್ ಏಷಿಯಾ ಎರಡನೇ ರನ್ನರ್ ಅಪ್) ಹಾಗೂ ಆಡ್ಲೈನ್ ಕ್ಯಾಸ್ಟೊಲಿನ್ (ಮಿಸ್ ಯುನಿವರ್ಸ್ ಮೂರನೇ ರನ್ನರ್ ಅಪ್) ಇವರು ತೀರ್ಪುಗಾರರಾಗಿ ವಿಜೇತರನ್ನು ಆಯ್ಕೆ ಮಾಡಿದ್ದರು.

Click Here

ಈಕೆ 2021 ಬೆಂಗಳೂರಿನಲ್ಲಿ ನಡೆದ ಇಗ್ನೈಟ್ ಇಂಡಿಯಾ ಮೆರಾಕ್ಕಿ ಫ್ಯಾಶನ್ ಸ್ಪರ್ಧೆಯ ಆರು ಜನ ವಿಜೇತರಲ್ಲಿ ಸ್ವೀಝಲ್ ಕೂಡ ಒಬ್ಬರಾಗಿದ್ದು, “ಫ್ರೆಶ್ ಫೇಸ್ ಆಫ್ ಇಗ್ನೈಟ್ ಇಂಡಿಯಾ 2021” ರ ಜೈಪುರ್ ನಲ್ಲಿ ನಡೆದ “ಸ್ಟಾರ್ ಮಿಸ್ ಟೀನ್ ಇಂಡಿಯಾ ಕಿರೀಟವನ್ನು ಕೂಡಾ ಮುಡಿಗೇರಿಸಿಕೊಂಡಿದ್ದರು.

ಫೆಬ್ರವರಿ 2022 ಜೈಪುರ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ “ಕ್ವೀನ್ ಆಫ್ ಕಾಸ್ಮೋಸ್ 2022″ರ ಸ್ಪರ್ಧೆಯಲ್ಲಿ ಫೈನಲ್ ಹಂತವನ್ನು ತಲುಪಿದ್ದರು.

ಬಾರಕೂರು ಸವಿತಾ ಪ್ರುಟಾರ್ಡೊರವರ ಮಗಳಾದ ಈಕೆ ಪ್ರಸ್ತುತ ಬೆಂಗಳೂರಿನ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಸ್ವೀಝಲ್ ಬಾಲ್ಯದಿಂದಲೂ ಫ್ಯಾಶನ್ ಮತ್ತು ಮಾಡೆಲಿಂಗ್ ನಲ್ಲಿ ಆಸಕ್ತಿಯನ್ನು ಹೊಂದಿದ್ದು 2017ರಲ್ಲಿ “ದಕ್ಷಿಣ ಭಾರತದ ಸೂಪರ್ ಮಾಡೆಲ್ ” ಮಕ್ಕಳ ವಿಭಾಗದಲ್ಲಿ ಕೂಡಾ ಪ್ರಶಸ್ತಿಯನ್ನು ಪಡೆದಿರುತ್ತಾಳೆ.

Click Here

LEAVE A REPLY

Please enter your comment!
Please enter your name here