ಗ್ರಾಮಪಂಚಾಯತ್ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷೆಯಾಗಿ ಕೋಟದ ಕಲಾವತಿ ಅಶೋಕ್ ಆಯ್ಕೆ

0
686

Click Here

Click Here

 

ಕುಂದಾಪುರ ಮಿರರ್ ಸುದ್ದಿ…

ಕೋಟ: ಬ್ರಹ್ಮಾವರ ತಾಲೂಕು ಮಟ್ಟದ ಸೀತಾ ಸಂಜೀವಿನಿ ಒಕ್ಕೂಟ ಇತ್ತೀಚಿಗೆ ರಚನೆಗೊಂಡಿತು.
ಚಾಂತಾರು ಗ್ರಾ.ಪಂ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರೀಯೆಯಲ್ಲಿ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟಗಳ ಆಯ್ದ ಪದಾಧಿಕಾರಿಗಳು ಭಾಗವಹಿಸಿದ್ದು, ಅಧ್ಯಕ್ಷರಾಗಿ ಕೋಟದ ಕಲಾವತಿ ಅಶೋಕ್, ಉಪಾಧ್ಯಕ್ಷರಾಗಿ ಗುಲಾಬಿ ಆವರ್ಸೆ, ಕಾರ್ಯದರ್ಶಿಯಾಗಿ ಬೇಬಿ ವಾರಂಬಳ್ಳಿ, ಜೊತೆ ಕಾರ್ಯದರ್ಶಿಯಾಗಿ ಸುಲೋಚನಾ 38 ಕಳತ್ತೂರು ಹಾಗೂ ಕೋಶಾಧಿಕಾರಿಯಾಗಿ ಶ್ರೀಲಕ್ಷ್ಮಿ ಅಡಿಗ ಕೊಕ್ಕರ್ಣೆ, ಸರ್ವಾನುಮತದಿಂದ ಆಯ್ಕೆಯಾದರು.

Click Here

ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ ಇಬ್ರಾಹಿಂಪುರ್ ಉಪಸ್ಥಿತರಿದ್ದು ಎಲ್ಲರಿಗೂ ಶುಭ ಹಾರೈಸಿದರು.

ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವ ತಾಲೂಕು ಒಕ್ಕೂಟದ ರಚನೆ, ಕಾರ್ಯವೈಖರಿಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಎನ್.ಆರ್.ಎಲ್.ಎಂ.ನ ಜಿಲ್ಲಾ ವ್ಯವಸ್ಥಾಪಕಿ ನವ್ಯಾ ಪ್ರಸ್ತಾವನೆಗೈದು, ಜಿ.ಪಿ.ಎಲ್.ಎಫ್. ಸಹಾಯಕಿ ಸುನೀತಾ ವಂದಿಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here