ಕುಂದಾಪುರ ಮಿರರ್ ಸುದ್ದಿ…
ಕೋಟ: ಪ್ರತಿವರ್ಷ ಮಳೆಗಾಲದಲ್ಲಿ ಕೋಟ ಗ್ರಾಮಪಂಚಾಯತ್, ಸಾಲಿಗ್ರಾಮ ಪ.ಪಂ ಹೀಗೆ ಸಾಕಷ್ಟು ಭಾಗಗಳಲ್ಲಿ ಕೃಷಿ ಭೂಮಿ ಕಂಠಕವಾಗಿ ಪರಿಣಮಿಸಿದ ಅಂತರಂಗೆ ಸಮಸ್ಯೆ ಹಾಗೂ ಹೊಳೆಗಳನ್ನು ಹೂಳೆತ್ತಿ ಕೃತಕ ನೆರೆ ಸಮಸ್ಯೆಗೆ ಮುಕ್ತಿಗಾಣಿಸುವ ಸಲುವಾಗಿ ಕೃಷಿಕರು, ಸಮಾನ ಮನಸ್ಕರು ಬುಧವಾರ ಕೋಟ ಮೂರಕೈ ಬಳಿ ಬನ್ನಾಡಿ ತೆರಳುವ ರಾಜ್ಯ ಹೆದಾರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪರವಾಗಿ ಶ್ಯಾಮಸುಂದರ್ ನಾಯರಿ ಅಂತರಂಗೆ ಹೊಳೆಗಳಲ್ಲಿ ವ್ಯಾಪಕವಾಗಿ ತುಂಬಿಕೊಂಡಿದ್ದು ಅಲ್ಲದೆ ಹೊಳೆಗಳಲ್ಲಿ ಹೂಳು ತುಂಬಿಕೊಂಡು ಸಾಕಷ್ಟು ಮನೆಗಳು ಜಲಾವೃತವಾಗಿದಲ್ಲದೆ ಭತ್ತದ ಕೃಷಿ ನೆಲಸಮಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಪರಿಹಾರವಾಗಿ ಹೊಳೆ ಹೂಳೆತ್ತುವುದು, ಅಂತರಂಗೆ ಇನ್ನಿತರ ಗಿಡಗಂಟಿಗಳನ್ನು ತರೆವುಗೊಳಿಸುವ ಜೊತೆಗೆ ಕೊಯ್ಕೂರು, ಗಿಳಿಯಾರು , ಬನ್ನಾಡಿ ಸೇತುವೆಯನ್ನು ಅಗಲಿಕರಣ, ಎತ್ತರಗೊಳಿಸಲು ಆಗ್ರಹಿಸಿದರಲ್ಲದೆ ಅಲ್ಲದೆ ಸಾಕಷ್ಟು ವರ್ಷದ ಈ ಬೇಡಿಕೆ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ನಿರ್ಲಕ್ಷ ತೋರಿದೆ ಇದರಿಂದ ಬರಿ ಆಶ್ವಾಸನೆ ಬೇಡ ನಮ್ಮಗೆ ಶಾಶ್ವತ ಪರಿಹಾರ ಬೇಕು ಎಂಬ ಘೋಷಣೆಗಳೊಂದಿಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
ರಸ್ತೆ ತಡೆ ಹೋರಾಟ
ಕೃಷಿಕರ ಹಾಗೂ ಜನಸಾಮಾನ್ಯರ ಸಮಸ್ಯೆಯಾದ ನೆರೆ ಹಾಗೂ ಅಂತರಗಂಗೆ ಸಮಸ್ಯೆಯನ್ನು ಶೀಘ್ರ ಮುಕ್ತಿಗೊಳುಸಲು ಬುಧವಾರ ಬನ್ನಾಡಿ ರಸ್ತೆ ಬಂದ್ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಕಂದಾಪುರ ಎ.ಸಿ ರಾಜು ಇಲ್ಲಿನ ಈ ಸಮಸ್ಯೆಯ ಕುರಿತು ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯಲ್ಲಿ ಮಾತುಕತೆ ನಡೆಸಿದ್ದೇನೆ. ಶೀಘ್ರ ಪರಿಹರಿಸುವ ಜೊತೆಗೆ ಇನ್ನು ಎರಡು ಮೂರು ದಿನಗಳಲ್ಲಿ ಅಂತರಗಂಗೆ ಹಾಗೂ ಗಿಡಗಂಟಿಗಳನ್ನು ತೆರೆವುಗೊಳಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರಲ್ಲದೆ ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ ನೀಡಿದರು. ಈ ವೇಳೆ ಪಿಡಬ್ಲುಡಿ ಇಂಜಿನಿಯರ್ ಮಂಜುನಾಥ್ ಇದ್ದರು.
ಶೀಘ್ರ ಪರಿಹಾರ ಕೈಗೊಳ್ಳದಿದ್ದರೆ ಹೆದ್ದಾರಿ ಬಂದ್ ಚಳುವಳಿ:
ಬಹುವರ್ಷಗಳ ಈ ಸಮಸ್ಯೆಗೆ ಶೀಘ್ರದಲ್ಲಿ ಮುಕ್ತಿದೊರಕದಿದ್ದರೆ ಮುಂದಿನ ದಿನಗಳಲ್ಲಿ 2ಸಾವಿರ ಅಧಿಕ ಕೃಷಿಕರನ್ನು ಸೇರಿಸಿ ಹೆದ್ದಾರಿ ಬಂದ್ ಚಳುವಳಿ ನಡೆಸುವ ಎಚ್ಚರಿಕೆಯನ್ನು ಹೋರಾಟಗಾರರು ಎಚ್ಚರಿಸಿದ್ದಾರೆ.
ಸಭೆಯಲ್ಲಿ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಸದಸ್ಯರಾದ ರತ್ನನಾಗರಾಜ್ ಗಾಣಿಗ, ಸುಕನ್ಯಾ ಶೆಟ್ಟಿ, ಕೃಷಿಕರಾದ ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಸಾಮಾಜಿಕ ಕಾರ್ಯಕರ್ತರಾದ ನಾಗರಾಜ್ ಗಾಣಿಗ,ರಾಧಕೃಷ್ಣ ಬ್ರಹ್ಮಾವರ, ಬೇಳೋರು ರಾಘವ ಶೆಟ್ಟಿ, ಜಯಕರ್ನಾಟಕದ ಸತೀಶ್ ಪೂಜಾರಿ, ಭೋಜ ಪೂಜಾರಿ,ಶ್ಯಾಮಸುಂದರ ನಾಯರಿ, ಕೋ.ಗಿ.ನಾ,ಟಿ.ಮಂಜುನಾಥ ಗಿಳಿಯಾರು,ಭರತ್ ಕುಮಾರ್ ಶೆಟ್ಟಿ, ರಾಜಾರಾಮ ಶೆಟ್ಟಿ, ಅಚ್ಯುತ್ ಪೂಜಾರಿ,ಸುಬಾಷ್ ಶೆಟ್ಟಿ,ಕೋಟ ಗ್ರಾ.ಪಂ ಅಧ್ಯಕ್ಷ ಅಜಿತ್ ದೇವಾಡಿಗ,ಉಮೇಶ್ ನಾಯರಿ ಮತ್ತಿತರರು ಉಪಸ್ಥಿತರಿದ್ದರು.











