ಕುಂದಾಪುರ:‌ “ಬಡವರ ವೈದ್ಯ”ಡಾ. ಎ.ಎಸ್. ಕಲ್ಕೂರ ನಿಧನ

0
1720

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: “ಬಡವರ ಡಾಕ್ಟರ್” ಎಂದೇ ಕುಂದಾಪುರ ಭಾಗದಲ್ಲಿ ಪ್ರಸಿದ್ಧಿ ಪಡೆದಿದ್ದ, ಹಂಗಳೂರಿನ‌ ಯೂನಿಟಿ ಹಾಲ್ ಬಳಿಯ ನಿವಾಸಿ ಡಾ. ಎ.ಎಸ್. ಕಲ್ಕೂರ (87) ಅವರು ವಯೋ ಸಹಜ ಅಸೌಖ್ಯದಿಂದ ಜು. 9 ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Click Here

ಇವರು ಆರಂಭದಲ್ಲಿ ಸರಕಾರಿ ವೈದ್ಯರಾಗಿ ವಿವಿಧೆಡೆ ಸೇವೆ ಸಲ್ಲಿಸಿದ್ದು, ಬಳಿಕ ಕುಂದಾಪುರ ನಗರದಲ್ಲಿ ತಾವೇ ಸ್ವತಃ ಪುಟ್ಟದಾದ ಕ್ಲಿನಿಕ್ ತೆರೆದು, 10 ರೂ., 20 ರೂ., 30 ರೂ.ನಷ್ಟು ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ಚಿಕಿತ್ಸೆಯೊಂದಿಗೆ, ಔಷಧಿ ನೀಡುವ ಮೂಲಕ “ಬಡವರ ವೈದ್ಯ”ರೆಂದೇ ಜನಾನುರಾಗಿಯಾಗಿದ್ದರು. ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಬಡವರ ಸೇವೆಗೆ ತಮ್ಮ ವೈದ್ಯಕೀಯ ವೃತ್ತಿಯನ್ನು ಮುಡಿಪಾಗಿಟ್ಟಿದ್ದರು. ಕುಂದಾಪುರ ತಾಲೂಕಿನ ಹಲವೆಡೆಗಳಿಂದ ಇವರಲ್ಲಿಗೆ ಸಾವಿರಾರು ಮಂದಿ ಶುಶ್ರೂಷೆಗಾಗಿ ಬರುತ್ತಿದ್ದರು.

Click Here

LEAVE A REPLY

Please enter your comment!
Please enter your name here