ಕಾಳಾವರದ ಪ್ರೌಢಶಾಲೆಗೆ ಆನ್ಸ್ ಕ್ಲಬ್ ನಿಂದ ಊಟದ ತಟ್ಟೆ ಹಾಗೂ ಸ್ಟ್ಯಾಂಡ್ ಕೊಡುಗೆ

0
133

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕಾಳಾವರದ ನೇತಾಜಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕೋಟೇಶ್ವರದ ರೋಟರಿ ಕ್ಲಬ್ ನ ಅಂಗಸಂಸ್ಥೆಯಾದ ಆನ್ಸ್ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರು ಕೊಡ ಮಾಡಿದ ಊಟದ ತಟ್ಟೆ ಹಾಗೂ ಸ್ಟ್ಯಾಂಡ್ ಕೊಡುಗೆಯನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೋಟೇಶ್ವರದ ಆನ್ಸ್ ಕ್ಲಬ್ ನ ಅಧ್ಯಕ್ಷರಾದ ರೇವತಿ ಪ್ರಭಾಕರ್ ಕೊಡುಗೆಯನ್ನು ಹಸ್ತಾಂತರಿಸಿ, ಕೊಡುಗೆಯನ್ನು ನೀಡಲು ಕ್ಲಬ್ ನ ಸರ್ವ ಸದಸ್ಯರ ಸಹಕಾರವನ್ನು ಸ್ಮರಿಸಿ, ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಸಮಾಜದಲ್ಲಿ ಗೌರವಯುತವಾಗಿ ಜೀವನವನ್ನು ಮಾಡುವುದರ ಮೂಲಕ ಮುಂದೆ ತಮ್ಮಿಂದಾದ ಸಹಾಯವನ್ನು ಸಮಾಜಕ್ಕೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.

Click Here

ರೋಟರಿ ಕ್ಲಬ್ ಕೋಟೇಶ್ವರದ ಅಧ್ಯಕ್ಷರಾದ ಅಕ್ಷತಾ ಗಿರೀಶ್ ಐತಾಳ್ ಅವರು ಮಾತನಾಡಿ ರೋಟರಿ ಮತ್ತು ಆನ್ಸ್ ಕ್ಲಬ್ ಪರಸ್ಪರ ಸಹಯೋಗದಿಂದ ಕಾರ್ಯನಿರ್ವಹಿಸುತ್ತಿದ್ದು ಸಮಾಜಕ್ಕೆ ಅತಿ ಅಗತ್ಯವಾದ ಸೌಲಭ್ಯವನ್ನು ಒದಗಿಸಿಕೊಡಲು ಸದಾ ಸಿದ್ಧವಿದೆ ಅದರಲ್ಲೂ ಶಾಲೆಗಳು ನಮ್ಮ ಮೊದಲ ಆದ್ಯತೆಗಳಾಗಿವೆ ಎಂದರು,

ರೊಟೇರಿಯನ್ ಸುರೇಶ್ ಶೆಟ್ಟಿ ಎನ್ ಮಾತನಾಡಿ ಶಾಲೆಯ ಸಾಧನೆ , ಶಿಕ್ಷಕರ ಪರಿಶ್ರಮ ಹಾಗೂ ನಿರಂತರ ಉತ್ತಮ ಫಲಿತಾಂಶವನ್ನು ಪ್ರಶಂಸಿ, ಮುಂದಿನ ದಿನಗಳಲ್ಲಿ ರೋಟರಿ ಹಾಗೂ ಆನ್ಸ್ ಕ್ಲಬ್ ನ ಸಹಕಾರದಿಂದ ಶಾಲೆಗೆ ಇನ್ನಷ್ಟು ಕೊಡುಗೆಗಳನ್ನು ನೀಡುವ ಭರವಸೆಯನ್ನು ನೀಡಿದರು.

ಕ್ಲಬ್ ನ ಕಾರ್ಯದರ್ಶಿ ದೀಪಿಕಾ ಯು ಶೆಟ್ಟಿ ರೊಟೇರಿಯನ್ ಚಂದ್ರಶೇಖರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕರಾದ ಗಣೇಶ್ ಶೆಟ್ಟಿಗಾರ್ ಮಾತನಾಡಿ ವಿದ್ಯಾರ್ಥಿಗಳ ಬಹುದಿನದ ಬೇಡಿಕೆಯನ್ನು ಈಡೇರಿಸಿದ ಕ್ಲಬ್ ನ ಎಲ್ಲಾ ಸದಸ್ಯರಿಗೂ ಶಾಲೆಯ ಹಾಗೂ ವಿದ್ಯಾರ್ಥಿಗಳ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸಿದರು . ಆನ್ಸ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು ಮುಖ್ಯೋಪಾಧ್ಯಾಯರಾದ ಮುಸರತ್ ಜಹಾನ್ ಅಕ್ಬರ್ ಎಂ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಶಿಕ್ಷಕರಾದ ಮಹಾಬಲೇಶ್ವರ ಭಾಗ್ವತ್ ಅವರು ಧನ್ಯವಾದ ಸಮರ್ಪಿಸಿದರು. ಶಿಕ್ಷಕ ರವಿರಾಜ್ ಶೆಟ್ಟಿ, ಕಾರ್ಯಕ್ರಮವನ್ನು ನಿರೂಪಿಸಿದರು. ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದು, ಸಹಕರಿಸಿದರು.
.

Click Here

LEAVE A REPLY

Please enter your comment!
Please enter your name here