ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೋಡಿ ಶ್ರೀರಾಮ ನಗರದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪುರಾತನ ವಸ್ತುಗಳ ಪ್ರದರ್ಶನ ಮತ್ತು ಮಾಹಿತಿ ಶಿಬಿರ ನಡೆಯಿತು. ಪ್ರದರ್ಶನ ಉದ್ಘಾಟಿಸಿದ ಶಾಲಾ ಸಂಚಾಲಕ ಕೋಡಿ ನಾಗೇಶ್ ಕಾಮತ್ ಇಂದು ತಂತ್ರಜ್ಞಾನ, ವೈಜ್ಞಾನಿಕತೆ ಬೆಳೆದು ಎಲ್ಲಾ ಕೆಲಸಗಳು ಕ್ಷಣ ಮಾತ್ರದಲ್ಲಿ
ಮುಕ್ತಾಯವಾಗುತ್ತದೆ. ಹಿಂದಿನ ಹಿರಿಯರು ಸಾಂಪ್ರದಾಯಿಕ, ಮತ್ತು ಸರಳ ವಿಧಾನಗಳನ್ನು ಬಳಸಿ ದೈನಂದಿನ ಜೀವನಕ್ಕೆ ಬೇಕಾಗುವ ಸಲಕರಣೆಗಳನ್ನು ಸಿದ್ಧಪಡಿಸಿರುವುದು ಅವರ ಬುದ್ಧಿವಂತಿಕೆ ಜ್ಞಾನವನ್ನು ತೋರ್ಪಡಿಸುತ್ತದೆ ಎಂದು
ನುಡಿದರು.
ಹಟ್ಟಿಯಂಗಡಿ ಸಿದ್ಧಿವಿನಾಯಕ ಆಂಗ್ಲ ಮಾಧ್ಯಮದ ಶಾಲೆಯ ಪರಿಣಿತ ಶಿಕ್ಷಕರು ಆಗಮಿಸಿ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನಗಳನ್ನು ನೀಡಿದರು. ವಿದ್ಯಾರ್ಥಿಗಳು ಸುಮಾರು ಐನೂರಕ್ಕೂ ಹೆಚ್ಚಿನ ಹಳೆಯ ಗೃಹ ಬಳಕೆಯ
ವಸ್ತುಗಳನ್ನು ಪ್ರದರ್ಶನದಲ್ಲಿ ಪ್ರದರ್ಶಿಸಿದರು. ಶಿಕ್ಷಕಿಯರಾದ ಆಶಾ ಕಾರ್ಯಕ್ರಮ ನಿರೂಪಿಸಿ, ನಮಿತಾ ವಂದಿಸಿದರು.












