ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾಹೋಮ ವಿಶೇಷ ಪೂಜಾ ಕಾರ್ಯ ಜರಗಿತು.
ಸೇವಾಕರ್ತರಾಗಿ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ ದಂಪತಿಗಳು, ಕಾಡೂರು ಪ್ರವೀಣ್ ಶೆಟ್ಟಿ ದಂಪತಿಗಳು ಭಾಗಿಯಾದರು.
ಧಾರ್ಮಿಕ ವಿಧಿವಿಧಾನಗಳನ್ನು ವೆ.ಮೂ ಮಧುಸೂದನ್ ಬಾಯರಿ ನೆರವೆರಿಸಿದರು.
ದೇಗುಲದಲ್ಲಿ ಮಹಾಪೂಜೆ, ಮಹಾಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗಿಯಾದರು.
ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ಸೇವಾರ್ತಿಗಳಿಗೆ ಶಾಲು ಹೊದಿಸಿ ಪ್ರಸಾದ ವಿತರಿಸಿ ಗೌರವಿಸಿದರು.
ದೇಗುಲದ ಟ್ರಸ್ಟಿಗಳು,ಅರ್ಚಕರು, ವ್ಯವಸ್ಥಾಪಕರು ಭಾಗಿಯಾದರು.
ವಿಜಯದಶಮಿ ದೇಗುಲದ ಅಧ್ಯಕ್ಷರಿಂದ ಸೇವೆ
ಬುಧವಾರ ಶ್ರೀ ದೇಗುಲದಲ್ಲಿ ವಿಜಯದಶಮಿ ಅಂಗವಾಗಿ ವಿಶೇಷ ಪೂಜೆ, ದುರ್ಗಾಹೋಮ ಮಹಾಅನ್ನಸಂತರ್ಪಣೆ ಕಾರ್ಯಕ್ರಮಗಳ ಸೇವಾಕರ್ತರಾಗಿ ಶ್ರೀ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ದಂಪತಿಗಳು ಭಾಗಿಯಾಗಲಿದ್ದಾರೆ.












