ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶಾರದೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಹಾಯಹಸ್ತ ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಿಕ್ಷಕಿ ಶ್ರೀಮತಿ ಎಸ್ ಮಯ್ಯ ಹೇಳಿದರು.
ಸೋಮವಾರ ಗುಂಡ್ಮಿಯಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿ ಹಾಗೂ ಜನಸ್ಪಂದನ ಮಿತ್ರ ಬಳಗ ಗುಂಡ್ಮಿ ಇವರ ಆಶ್ರಯದಲ್ಲಿ 16ನೇ ವರ್ಷದ ಶಾರದೋತ್ಸವ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಮಾಜಿಕ ಬದ್ಧತೆಯ ಮೂಲಕ ಸಾಂಸ್ಕೃತಿಕ ವೇದಿಕೆ ಕಲ್ಪಿಸಿ ಧಾರ್ಮಿಕ ಕಾರ್ಯಕ್ಕೆ ಒತ್ತು ನೀಡಿ ಗ್ರಾಮ ಅಭಿವೃದ್ಧಿ ಸಾಧ್ಯ ಎಂಬುವುದನ್ನು ಶಾರದೋತ್ಸವ ತೊರಿಸಿಕೊಟ್ಟಿವೆ. ವಿದ್ಯೆ ಮತ್ತು ಅನ್ನದಾನ ಶ್ರೇಷ್ಠದಾನಗಳಾಗಿದ್ದು ಉತ್ಸವಗಳು ಅರ್ಥಪೂರ್ಣ ವ್ಯವಸ್ಥೆಗೆ ಮುನ್ನುಡಿ ಬರೆದಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಗುಂಡ್ಮಿ ಪ್ರಾಥಮಿಕ ಶಾಲೆ ಎರಡು ಕಂಪ್ಯೂಟರ್ ಹಾಗೂ ಸ್ಥಳೀಯ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಕೋಟ ಸಿ.ಎ ಬ್ಯಾಂಕ್ ನಿರ್ದೇಶಕ ರಘು ಮಧ್ಯಸ್ಥ, ಉದ್ಯಮಿ ನಾಗರಾಜ್ ಪಡುಕರೆ, ನಿವೃತ್ತ ಬ್ಯಾಂಕ್ ಉದ್ಯೋಗಿ ಭೋಜರಾಜ್ ದೇವಾಡಿಗ, ಸಾಂಸ್ಕೃತಿಕ ಚಿಂತಕಿ ಮಂಜುಳಾ ಮುರುಲೀಧರ್ ರಾವ್, ಉದ್ಯಮಿ ಆನಂದ್ ಆಚಾರ್, ಮಾಣಿಕಟ್ಟು ದೇಗುಲದ ಮುಕ್ತೇಸರ ಮಹಾಬಲ ಮಯ್ಯ, ಸಮಿತಿಯ ಗೌರವಾಧ್ಯಕ್ಷ ಪಂಜು ಪೂಜಾರಿ ಉಪಸ್ಥಿತರಿದ್ದರು. ಶಾರದೋತ್ಸವ ಸಮಿತಿ ಅಧ್ಯಕ್ಷ ದೇವೇಂದ್ರ ದೇವಾಡಿಗ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಮಾಧವ ಕಾರ್ಕಡ ನಿರೂಪಿಸಿ, ವಂದಿಸಿದರು. ರಾಜು ಸಹಕರಿಸಿದರು.












