ಸಾಬರಕಟ್ಟೆ ರೋಟರಿ ಕ್ಲಬ್ ಪದಪ್ರದಾನ

0
1494

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ರೋಟರಿ ಎಂದರೆ ಸ್ನೇಹ, ಸಹಕಾರ ಹಾಗೂ ಸೇವಾಮನೋಭಾವದ ಸಂಕೇತ. ಸಾಬರಕಟ್ಟೆ ರೋಟರಿ ಕ್ಲಬ್ ಹಲವು ವರ್ಷಗಳಿಂದ ಪರಿಸರದಲ್ಲಿ ಉತ್ತಮ ಕೆಲಸಗಳಿಂದ ಪ್ರಸಿದ್ದವಾಗಿದೆ. ಕ್ರೀಯಾಶೀಲ ಯುವಕ ಸನ್ಮತ್ ಹೆಗ್ಡೆಯವರು ಅಧ್ಯಕ್ಷರಾಗಿ ಪದಪ್ರದಾನ ಮಾಡುವ ಈ ಸಂದರ್ಭದಲ್ಲಿ ಕೊರೊನಾ ಲಾಕ್‌ಡೌನ್ ವೇಳೆಯಲ್ಲಿ ಅಶಕ್ತರಿಗೆ ಮಾಡಿದ ಸೇವೆಗಾಗಿ ಡಾ. ಅವಿನ್ ಆಳ್ವಾ ಮತ್ತು ಜಯರಾಂ ಆಚಾರ್ಯ ಅವರನ್ನು ಸನ್ಮಾನಿಸುತ್ತಿರುವುದು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡಿದಂತಾಗಿದೆ ಎಂದು ರೋಟರಿ ವಲಯ ೯ರ ಮಾಜಿ ಅಸಿಸ್ಟೆಂಟ್ ಗವರ್ನರ್ ಪಿ‌ಎಚ್‌ಎಫ್ ಮೋಹನ್ ಡಿ ಹೇಳಿದರು.

Click Here

ಅವರು ಜುಲೈ೧೦ ಆದಿತ್ಯವಾರ ಸಾಬರಕಟ್ಟ್ಟೆ ಸ್ವಾಗತ್ ಮಿನಿಹಾಲ್‌ನಲ್ಲಿ ನಡೆದ ಸಾಬರಕಟ್ಟೆ ರೋಟರಿ ಕ್ಲಬ್ ಪದಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸನ್ಮತ್ ಹೆಗ್ಡೆ, ವಲಯ ೯ರ ಅಸಿಸ್ಟೆಂಟ್ ಗವರ್ನರ್ ಪಿ‌ಎಚ್‌ಎಫ್ ಆನಂದ ಶೆಟ್ಟಿ, ಝೋನಲ್ ಲೆಫ್ಟಿನೆಂಟ್ ಪ್ರಾಣೇಶ್ ಎಸ್.ಕೆ., ಹಿಂದಿನ ಅವಧಿಯ ಅಸಿಸ್ಟೆಂಟ್ ಗವರ್ನರ್ ಪಿ‌ಎಚ್‌ಎಫ್ ಪದ್ಮನಾಭ ಕಾಂಚನ್ ಕೆ., ಹಿಂದಿನ ಅವಧಿಯ ಝೋನಲ್ ಲೆಫ್ಟಿನೆಂಟ್ ವಿಜಯಕುಮಾರ್ ಶೆಟ್ಟಿ ಕೆ ನಿರ್ಗಮನ ಅಧ್ಯಕ್ಷ ಯು. ಪ್ರಸಾದ್ ಭಟ್, ಪಿ‌ಎಚ್‌ಎಫ್ ಅಣ್ಣಯ್ಯ ದಾಸ್, ನಿಲಕಂಠ ರಾವ್ ಮುಂತಾದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here