ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ಪ್ರಧಾನ ಕಛೇರಿಯಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಜನ್ಮ ದಿನಾಚರಣೆ ಹಾಗೂ ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ, ಸ್ಥಾಪನೆಯಾದ ದಿನಾಚರಣೆಯನ್ನು ಆಚರಿಸಲಾಯಿತು.
ಸಂಘವು ಈ ದಿನ 55 ವರ್ಷ ಸಾರ್ಥಕ ಸೇವೆಯನ್ನು ಸದಸ್ಯರಿಗೆ ನೀಡಿದೆ ಸ್ಥಾಪಕ ಅಧ್ಯಕ್ಷ ದಿ | ಮೋನಪ್ಪ ಶೆಟ್ಟಿ ಅವರನ್ನು ಸ್ಮರಿಸಲಾಯಿತು ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀಧರ್ ಪಿ ಎಸ್ ಅವರು ಕಾರ್ಯಕ್ರಮವನ್ನು ನೆರೆವೇರಿಸಿದರು, ನಿರ್ದೇಶಕರಾದ ಉದಯ ಮರಕಾಲ, ಶೇಖರ್ ಗದ್ದೆಮನೆ, ಕಮಲ ಆಚಾರ್, ಸಿ.ಇ.ಒ ವಿಜಯ್ ಪೂಜಾರಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.











