ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸುರವರ ಜನ್ಮದಿನ ಆಚರಣೆ

0
531

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಮಾಜಿ ಪ್ರಧಾನಿ ದಿ| ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ದಿ| ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಇಬ್ಬರು ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಕಾಂಗ್ರೆಸ್ ಮುಖಂಡರು ಗೌರವ ಸಲ್ಲಿಸಲಾಯಿತು.

ಹಿರಿಯ ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರು ಆ ಕಾಲದಲ್ಲಿ ನವಭಾರತದ ಕಲ್ಪನೆಯನ್ನು ಕಂಡು, ಅದನ್ನು ಸಾಕಾರಗೊಳಿಸಲು ಶ್ರಮಿಸಿದವರು. ಅವರಂತೆಯೇ ರಾಜ್ಯದಲ್ಲಿ ದೇವರಾಜ ಅರಸು ಅವರು ಸಹ ಸಾಮಾಜಿಕ ನ್ಯಾಯದ ಹರಿಕಾರರಾಗಿ, ದೀನದಲಿತರ, ಬಡವರ, ಹಿಂದುಳಿದ ವರ್ಗದವರ ಏಳ್ಗೆಗೆ ಅವಿರತವಾಗಿ ಶ್ರಮಿಸಿದ ಜನಪರ ಕಾಳಜಿಯುಳ್ಳ ನಾಯಕ ಎಂದವರು ಹೇಳಿದರು.

Click Here

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ರಾಜೀವ್ ಗಾಂಧಿಯವರು ಆ ಕಾಲದಲ್ಲಿಯೇ ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಕಂಡವರು. ನಾವಿಂದು ಕಾಣುತ್ತಿರುವ ತಂತ್ರಜ್ಞಾನ, ಆಧುನೀಕರಣಗಳೆಲ್ಲದರ ಬಗ್ಗೆ ಅವರು ಅಂದಿನ ದಿನಗಳಲ್ಲೇ ಕನಸು ಕಂಡವರು. ಇನ್ನು ದೇವರಾಜ ಅರಸು ಅವರು ಈ ರಾಜ್ಯ ಕಂಡ ನೆಚ್ಚಿನ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದವರು. ಅವರಂತಯೇ ಈಗ ನಮ್ಮ ಸಿದ್ದರಾಮಯ್ಯನವರು ಎಲ್ಲ ವರ್ಗದವರ ಬಗ್ಗೆ, ಕೆಳವರ್ಗದವರ ಬಗ್ಗೆ ಅತೀವವಾದ ಕಾಳಜಿಯುಳ್ಳ ನಾಯಕರಾಗಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಅವರ ಮೇಲೆ ಮೊಟ್ಟೆ ಎಸೆಯುವ ನೀಚ ಕೃತ್ಯವನ್ನು ಮಾಡಿರುವ ಬಿಜೆಪಿ ಕೀಳುಮಟ್ಟಕ್ಕಿಳಿದಿದೆ ಎಂದವರು ಕೀಡಿಕಾರಿದರು.

ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ, ಪಕ್ಷದ ಮುಖಂಡ ಗಂಗಾಧರ ಶೆಟ್ಟಿ ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ಕೆ. ವಿಕಾಸ್ ಹೆಗ್ಡೆ, ದೇವಕಿ ಸಣ್ಣಯ್ಯ, ರೇವತಿ ಶೆಟ್ಟಿ, ರಮೇಶ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಕೇಶವ ಭಟ್, ಜೋಸೆಫ್ ರೆಬೆಲೋ, ಅಭಿಜಿತ್ ಪೂಜಾರಿ, ದೋಲಿನ್, ಶೋಭಾ ಸಚ್ಚಿದಾನಂದ, ಸಂಗೀತ ಉಪಸ್ಥಿತರಿದ್ದರು.

ಆಶಾ ಕರ್ವಾಲೋ ಸ್ವಾಗತಿಸಿ, ಜ್ಯೋತಿ ಡಿ. ವಂದಿಸಿದರು. ನಾರಾಯಣ ಆಚಾರ್ ಪ್ರಸ್ತಾವಿಸಿ, ಕಾರ್‍ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here