ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದ ಪದಗ್ರಹಣ ಸಮಾರಂಭ ಕುಂಭಾಶಿಯ ಶ್ರೀ ವಿನಾಯಕ ಸಭಾಗೃಹದಲ್ಲಿ ಜರುಗಿತು.

ಕಳೆದ ಸಾಲಿನಲ್ಲಿ ಸ್ಥಾಪನೆಗೊಂಡ ಅಮೃತಧಾರದ ಸ್ಥಾಪಕ ಅಧ್ಯಕ್ಷರಾದ ಸರಸ್ವತಿ ಗಣೇಶ್ ಪುತ್ರನ್ ಹಾಗೂ ಕಾರ್ಯದರ್ಶಿ ಜಯಶೀಲ ಕಾಮತ್, ಅವರು ಈ ಸಾಲಿನಲ್ಲಿ ಪುನರಪಿ ಅಧ್ಯಕ್ಷ, ಕಾರ್ಯದರ್ಶಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪದ ಪ್ರಧಾನ ಅಧಿಕಾರಿಯಾಗಿ ಲಯನ್ಸ್ ಜಿಲ್ಲೆ 317Cನ ಮಾಜಿ ಗವರ್ನರ್ ಲಯನ್ ನೀಲಕಾಂತ ಎಂ ಹೆಗಡೆಯವರು ಅಧ್ಯಕ್ಷರು ಹಾಗೂ ತಂಡಕ್ಕೆ ಪದಪ್ರದಾನ ಮಾಡಿದರು.
ಮೊದಲ ಉಪಾಧ್ಯಕ್ಷರಾಗಿ ಆಶಾ ಶಿವರಾಮ ಶೆಟ್ಟಿ, ದ್ವಿತೀಯ ಉಪಾಧ್ಯಕ್ಷರಾಗಿ ಡಾಕ್ಟರ್ ವಾಣಿಶ್ರೀ ಐತಾಳ್, ಖಜಾಂಜಿಯಗಿ ಸಮಶ್ರೀ ಧನ್ಯ, ಪದವಿ ಸ್ವೀಕರಿಸಿದರು, ಜೊತೆಗೆ ನಿರ್ದೇಶಕರಾಗಿ ಕಲ್ಪನಾ ಭಾಸ್ಕರ್ ಚಂದ್ರಿಕಾ ಧನ್ಯ, ಅಮೃತ ಬನವಾಲಿಕರ್ ಕಾಂಚನ ಕೆ, ಮೇಘ ಭರತ್, ಡಾಕ್ಟರ್ ಮೈತ್ರಿ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ನೂತನ ಸದಸ್ಯರಾಗಿ ಡಾಕ್ಟರ್ ಶಿಲ್ಪಾ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ ಜಿಲ್ಲೆಯ ಮಾಜಿ ಗವರ್ನರ್ ಅಮತಧಾರಾ ಒಂದು ವರ್ಷದ ಕಾರ್ಯಚಟುವಟಿಕೆಗಳು ಲಯನ್ಸ್ ಜಿಲ್ಲೆಗೆ ಮಾದರಿಯಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಡಗರದಲ್ಲಿ ಗಣ್ಯರಿಗೆ ರಾಷ್ಟ್ರಧ್ವಜವನ್ನು ವಿತರಿಸಲಾಯಿತು. ಕ್ಯಾನ್ಸರ್ ರೋಗಿಗೆ ಸಹಾಯಧನವನ್ನು ವಿತರಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷೆ ಸರಸ್ವತಿ ಗಣೇಶ್ ಪುತ್ರನ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪ್ರಥಮ ಲಯನ್ಸ್ ಜಿಲ್ಲಾ ಉಪ ರಾಜ್ಯಪಾಲ ಡಾ.ನೇರಿ ಕರ್ನೆಲಿಯೋ ಭೋಜರಾಜ್ ಶೆಟ್ಡಿ ,ಪ್ರಾಂತ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ, ವಲಯಾಧ್ಯಕ್ಷ ಸುಜಯ್ ಶೆಟ್ಟಿ,ಅಕ್ಷಯ್ ಹೆಗಡೆ, ಉಪಸ್ಥಿತರಿದ್ದರು. ಸುಮಶ್ರೀ ಧನ್ಯ ಪ್ರಾರ್ಥಿಸಿ ಕಾರ್ಯದರ್ಶಿ ಜಯಶೀಲಾ ಕಾಮತ್ ವಂದಿಸಿದರು.
ಚಂದ್ರಿಕಾ ಧನ್ಯ ಕ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಅರುಣ್ ಕುಮಾರ್ ಹೆಗ್ಡೆ, ಪ್ರಕಾಶ್ ಬೆಟ್ಟಿನ್ ರಾಜೀವ ಕೋಟ್ಯಾನ್, ಚಂದ್ರಶೇಖರ್ ಕಲ್ಪತರು, ಸೀತಾರಾಮ್ ಶೆಟ್ಟಿ ಬನ್ನಾಡಿ ಸೋಮನಾಥ ಹೆಗಡೆ,ಬನ್ನಾಡಿ ಉದಯಕುಮಾರ್ ಶೆಟ್ಟಿ, ಧೀನಪಾಲ್ ಶೆಟ್ಟಿ, ಏಕನಾಥ ಬೋಳಾರ್, ರಮಾ ಬೋಳಾರ್,ಸಪ್ನಾ ಸುರೇಶ್, ದಿನಕರ ಶೆಟ್ಟಿ, ರಜತ್ ಹೆಗಡೆ ರಾಮಚಂದ್ರ ಆಚಾರ್, ಧರ್ಮರಾಜ್ ಮೊದಲಿಯಾರ್ ಬಾಲಕೃಷ್ಣ ಶೆಟ್ಟಿ, ಕಿರಣ್ ಕುಂದಾಪುರ, ಚಂದ್ರಶೇಖರ ಶೆಟ್ಟ, ಬಾಲಕೃಷ್ಣ ಹೆಗಡೆ ,ನವೀನ್ ಕುಮಾರ್ ಶೆಟ್ಟಿ, ಸುಧಾಕರ್ ಹೆಗಡೆ, ಸೀತಾರಾಮ ಧನ್ಯ,ಗಣೇಶ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.











