ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ

0
294

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಬನ್ನಾಡಿ ಗ್ರಾಮದ ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆ.19 ಮತ್ತು 20 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.

ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿಯ ಪ್ರಯುಕ್ತ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ, ಧಾರ್ಮಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳು, ಮೊಸರು ಕುಡಿಕೆ, ಹಗ್ಗಜಗ್ಗಾಟ ಸ್ಪರ್ಧೆ ಮತ್ತು ಮುದ್ದುಕೃಷ್ಣ ಸ್ಪರ್ಧೆಯನ್ನು ನಡೆಸಲಾಯಿತು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯವರಿಂದ ಹಾಗೂ ಅಶ್ವಿನಿ ಉಪ್ಲಾಡಿ ಅವರ ತಂಡದವರಿಂದ ಭಜನಾ ಕಾರ್ಯಕ್ರಮ ಜರುಗಿತು.

Click Here

ಕ್ರೀಡಾ ಕಾರ್ಯಕ್ರಮದ ಅಂಗವಾಗಿ ನಡೆದ ಮೊಸರು ಕುಡಿಕೆ ಸ್ಪರ್ಧೆಯಲ್ಲಿ ಉಪ್ಲಾಡಿ ಸಂದೀಪ್ ಇವರು ಪುರುಷರ ವಿಭಾಗದಲ್ಲಿ ಹಾಗೂ ವಡ್ಡರ್ಸೆ ಗ್ರಾಮ ಪಂಚಾಯತ್ ಸದಸ್ಯೆ ಪಲ್ಲವಿ ಪೂಜಾರಿ ಮಹಿಳೆಯರ ವಿಭಾಗದಲ್ಲಿ ವಿಜೇತರಾದರು. ಹಗ್ಗಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮುಖೇಶ್ ಬನ್ನಾಡಿ ಇವರ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ವಡ್ಡರ್ಸೆ ಗ್ರಾಮ ಪಂಚಾಯತ್ ಸದಸ್ಯೆ ಪಲ್ಲವಿ ಪೂಜಾರಿ ಇವರ ತಂಡ ಪ್ರಶಸ್ತಿಯನ್ನು ಪಡೆದರು.
ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಪ್ಲಾಡಿ ಮತ್ತು ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ ಆಶ್ರಯದಲ್ಲಿ ನಡೆದ ಮುದ್ದುಕೃಷ್ಣ ಸ್ಪರ್ಧೆಯ 3 ವರ್ಷದ ವಿಭಾಗದಲ್ಲಿ ಚಿತ್ರಪಾಡಿ ಸ್ಮಯಾ ಚಿತ್ರಪಾಡಿ ಪ್ರಥಮ ಬಹುಮಾನವನ್ನು, ವಡ್ಡರ್ಸೆ ಋತ್ವಿಕ್ ಎನ್ ಪೂಜಾರಿ ವಡ್ಡರ್ಸೆ ದ್ವಿತೀಯ ಬಹುಮಾನವನ್ನು ಹಾಗೂ ಉಪ್ಲಾಡಿ ಐಷಾನಿ ಎಸ್ ಉಪ್ಲಾಡಿ ತೃತೀಯಾ ಬಹುಮಾನವನ್ನು ಪಡೆದರು.
3-6 ವರ್ಷದ ವಿಭಾಗದಲ್ಲಿ ಭುವಿ ಶೆಟ್ಟಿ ಪ್ರಥಮ ಬಹುಮಾನವನ್ನು, ಶಾರ್ವರಿ ದ್ವೀತಿಯ ಬಹುಮಾನವನ್ನು ಹಾಗೂ ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಅಂಶು ಬನ್ನಾಡಿ ತೃತೀಯಾ ಬಹುಮಾನವನ್ನು ಪಡೆದರು.

ಯಾಳಕ್ಲು ಚಂದ್ರಶೇಖರ್ ಶೆಟ್ಟಿ, ವಡ್ಡರ್ಸೆ ಹಾಡಿಮನೆ ಬಾಲಕೃಷ್ಣ ಶೆಟ್ಟಿ ಮತ್ತು ಯಾಳಕ್ಲು ನಾರಾಯಣ ಶೆಟ್ಟಿ ಇವರು ಮುದ್ದು ಕೃಷ್ಣ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಪ್ಲಾಡಿ ಇದರ ವ್ಯವಸ್ಥಾಪನ ಸಮಿತಿಯ ಹಿಂದಿನ ಅಧ್ಯಕ್ಷ ಬಿ. ಭೋಜ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಕಾರ್ಯದರ್ಶಿ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ ಹಾಗೂ ಸದಸ್ಯರಾದ ಉಪ್ಲಾಡಿ ಸುಗುಣಾಕರ ಶೆಟ್ಟಿ, ಬನ್ನಾಡಿ ಸುಭಾಶ್ಚಂದ್ರ ಶೆಟ್ಟಿ ಹಾಗೂ ಕೂರಾಡಿ ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಶ್ರೀ ಗೋಪಾಲಕೃಷ್ಣ ದೇವರ ಉತ್ಸವ ಮೂರ್ತಿಯ ಪುರಮೆರವಣಿಗೆಯನ್ನು ನಡೆಸಲಾಯಿತು.

Click Here

LEAVE A REPLY

Please enter your comment!
Please enter your name here