ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಅಘೋರೇಶ್ವರ ಕಲಾರಂಗ ಕಾರ್ತಟ್ಟು ಚಿತ್ರಪಾಡಿ ವತಿಯಿಂದ ಪ್ರತಿ ವರುಷದಂತೆ ಈ ಬಾರಿಯೂ ಕಾರ್ತಟ್ಟು ಚಿತ್ರಪಾಡಿಯ ನಿವೃತ್ತ ಶಿಕ್ಷಕ ದಂಪತಿಗಳಾದ ಹಾಗೂ ರಂಗಯ್ಯ ಅಡಿಗ ಇವರನ್ನು ಅವರ ಸ್ವಗೃಹಕ್ಕೆ ತೆರಳಿ ಗೌರವಿಸಿ ಗುರುವಂದನೆ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಾರಂಗದ ಅಧ್ಯಕ್ಷ ಆರ್ ಕೆ ಬ್ರಹ್ಮಾವರ್, ಕಾರ್ಯದರ್ಶಿ ವಿಶ್ವನಾಥ ಗಾಣಿಗ ಬೆಟ್ಲಕ್ಕಿ ಹಾಗೂ ಮಾಜಿ ಅಧ್ಯಕ್ಷ ಶಿವಾನಂದ ನಾಯರಿ, ರಾಘವೇಂದ್ರ ನಾಯರಿ ,ಉಪಾಧ್ಯಕ್ಷ ಶ್ಯಾಮ ಸುಂದರ್ ನಾಯರಿ, ಸದಸ್ಯರಾದ ರವಿ ಬನ್ನಾಡಿ, ಕುಮಾರಿ ಸಂಗೀತ, ರಾಮ ನಾಯರಿ, ರಂಜಿತಾ, ಸತ್ಯನಾರಾಯಣ ಆಚಾರ್, ವೆಂಕಟೇಶ್ ಕೆ, ನಾಗರಾಜ್ ಮಕ್ಕಿಮನೆ ಉಪಸ್ಥಿತರಿದ್ದರು.











