ಶಿಕ್ಷಕ ವೃತ್ತಿ ಜ್ಞಾನದಾಹಿಗಳ ಹಸಿವನ್ನು ಇಂಗಿಸುವ ಪವಿತ್ರ ಕಾಯಕ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶಿಕ್ಷಕ ವೃತ್ತಿ ಹೊಟ್ಟೆಪಾಡಿನ ಉಪಕಸುಬಲ್ಲ. ಸಹಸ್ರಾರು ಜ್ಞಾನದಾಹಿಗಳ ಹಸಿವನ್ನು ಇಂಗಿಸುವ ಪವಿತ್ರ ಕಾಯಕ ಎಂದು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು ಬೋರ್ಡ್ ಹೈಸ್ಕೂಲ್ನ ಉಪ ಪ್ರಾಂಶುಪಾಲ ಕಿರಣ್ ಹೆಗ್ಗಡೆ ಹೇಳಿದರು. ಅವರು ಸಂಸ್ಥೆಯ ಮಕ್ಕಳೇ ಸಂಯೋಜಿಸಿ ನಿರ್ವಹಿಸಿದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಣಿಪಾಲ್ ಫೌಂಡೇಶನ್ ಇವರಿಂದ ಕೊಡಲ್ಪಟ್ಟ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಕನ್ನಡ ಮಾಧ್ಯಮದಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿ ಕುಮಾರಿ ರಕ್ಷಿತಾಳಿಗೆ ನಗದು ಬಹುಮಾನವನ್ನು ಉಪಪ್ರಾಂಶುಪಾಲರು ಹಸ್ತಾಂತರಿಸಿದರು.
ವಿದ್ಯಾರ್ಥಿಗಳು ಶಿಕ್ಷಕರಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ವಿದ್ಯಾರ್ಥಿನಿ ಗೌತಮಿ ಅವರು ಡಾ। ರಾಧಾಕಷ್ಣನ್ ರವರ ಬಗ್ಗೆ ಪರಿಚಯಿಸಿದರು. ಸಭೆಯಲ್ಲಿ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು. ಬಹುಮಾನಿತ ಶಿಕ್ಷಕರ ಪಟ್ಟಿಯನ್ನು ಐಶ್ವರ್ಯ ವಾಚಿಸಿದರು ವೈಷ್ಣವಿ ಕಾರ್ಯಕ್ರಮ ನಿರೂಪಿಸಿ ರಿಯಾ ವಂದಿಸಿದರು











