ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸರಕಾರಿ ಪದವಿಪೂರ್ವ ಕಾಲೇಜು ಬೋರ್ಡ್ ಹೈಸ್ಕೂಲ್ ಕುಂದಾಪುರ ಇಲ್ಲಿ ರೋಟರಿ ಸನ್ ರೈಸ್ ಇವರ ಪ್ರಾಯೋಜಕತ್ವದ ಇಂಟರ್ರಾಕ್ಟ ಕ್ಲಬ್ ಪದಗ್ರಹಣ ಕಾರ್ಯಕ್ರಮ ರೋಟರಿ ಸಭಾ ಭವನ ಇಲ್ಲಿ ನಡೆಯಿತು.

ರೋಟರಿ ಸನ್ ರೈಸ್ ಕುಂದಾಪುರ ಇದರ ಅಧ್ಯಕ್ಷರಾದ ಬಿ ಎಂ ಚಂದ್ರಶೇಖರ್ ಮಾತನಾಡಿ ಮಕ್ಕಳಲ್ಲಿ ನಾಯಕತ್ವ ಗುಣ ಸೇವಾ ಮನೋಭಾವನೆ ಮೊದಲಾದ ಗುಣಗಳೊಂದಿಗೆ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯೊಂದಿಗಿನ ಸಂಬಂಧ ವೃದ್ಧಿಗೆ ಇಂಟರ್ರಾಕ್ಟ ಕ್ಲಬ್ ಸಹಕಾರಿ ಎಂದರು.
ಇಂಟರ್ರಾಕ್ಟ ಕ್ಲಬ್ ನ ಮಾರ್ಗದರ್ಶಿ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪಪ್ರಾಂಶುಪಾಲರಾದ ಕಿರಣ್ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ರೊ.ಜೆ ಪಿ ಶೆಟ್ಟಿ ಇಂಟರ್ರಾಕ್ಟ ವೈಸ್ ಚೇರ್ಮನ್ , ರೊ.ಪೂರ್ಣಿಮಾ ಭವಾನಿ ಶಂಕರ್ ರೊ. ದಿನಕರ ಪಟೇಲ್ ರೊ.ಜುಡಿತ್ ಮೆಂಡೋನ್ಸಾ ರೊ. ನವೀನ್ ಡಿಸೋಜಾ ಇಂಟರ್ರಾಕ್ಟ ಕ್ಲಬ್ ಅಧ್ಯಕ್ಷ ಸಾತ್ವಿಕ್ ಕಾರ್ಯದರ್ಶಿ ಕ್ಷಿಪಾಲಿ ಉಪಸ್ಥಿತರಿದ್ದರು.
ವರಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ಭೂಮಿಕಾ ವಂದಿಸಿದರು.











