ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಮ್ಮ ಕಣ್ಣಮುಂದಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚಲು ಅವಕಾಶ ಇದೆ ಎಂಬುದಾಗಿ ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರ ಹೇಳಿದರು. ಅವರು ಕುಂದಾಪುರದಲ್ಲಿ ಆಯೋಜಿಸಲಾಗಿದ್ದ ಬೆರಗು ಕುಂದಾಪುರ ಅಷ್ರ್ಯದಲ್ಲಿ ನಡೆದ ಶೈಕ್ಷಣಿಕ ಸಾಧಕರಿಗೆ ಹಾಗೂ ಕ್ರೀಡಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಸಾಕಷ್ಟು ತೆರೆಮರೆಯ ಪ್ರತಿಭೆಗಳಿವೆ. ಆರ್ಥಿಕವಾಗಿ ಸವಾಲುಗಳನ್ನು ಎದುರಿಸುತ್ತಿರುವ ಅಂತಹಾ ಪ್ರತಿಭೆಗಳಿಗೆ ಮಾರ್ಗದರ್ಶನ ಹಾಗೂ ಧೈರ್ಯ ತುಂಬಿಸಿ ಹುರುದುಂಬಿಸಿದಾಗ ಪ್ರಭೆಗಳು ಅನಾವರಣ ಗೊಳ್ಳುವುದು ಸಾಧ್ಯವಾಘುತ್ತದೆ ಎಂದವರು ಹೇಳಿದರು. ಈ ನಿಟ್ಟಿನಲ್ಲಿ ಬೆರಗು ಕುಂದಾಫುರ ಕಾರ್ಯ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಸಾಧಕರಾದ ಗುರುರಾಜ್ ಪೂಜಾರಿ ಹಾಗೂ ಐಕಳ ಶ್ರೀನಿವಾಸ ಗೌಡ ಅವರನ್ನು ನೆನಪಿಸಿದರು. ಶೈಕ್ಷಣಿಕ ಸಾಧಕರನ್ನು ಹಾಗೂ ಕರಾಟೆ ಯಲ್ಲಿ ಅಂತಾರಾಷ್ಟ್ರೀಯವಾಗಿ ಮಿಂಚಿದ ಸಾಧಕರನ್ನು ಹಿರಿಯ ವೈದ್ಯರಾದ ಡಾ. ರಂಜಿತ್ ಕುಮಾರ್ ಶೆಟ್ಟಿ ಹಾಗೂ ವಕೀಲರಾದ ರವಿಕಿರಣ್ ಮುರ್ಡೇಶ್ವರ ಸನ್ಮಾನಿಸಿದರು ಹಾಗೂ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ್ ವಿ ವಹಿಸಿದ್ದರು. ರಾಜೇಶ್ ವಿ ಸ್ವಾಗತಿಸಿ ರಮೇಶ ವಿ ನಿರ್ವಹಣೆ ಮಾಡಿದರು.











