ಕುಂದಾಪುರ ಮಿರರ್ ಸುದ್ದಿ…
ಕೋಟ: ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಸಾಲಿಗ್ರಾಮ ಘಟಕ ಮತ್ತು ಮಹಿಳಾ ಸಂಘಟನೆ ಸಾಲಿಗ್ರಾಮ ,ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ರಕ್ತನಿಧಿ ಕೆ.ಎಂ ಸಿ ಆಸ್ಪತ್ರೆ ಮಣಿಪಾಲ,ಜಿಲ್ಲಾಡಳಿತ ಉಡುಪಿ ಇವರ ನೇತ್ರತ್ವದಲ್ಲಿ ಹೆಚ್.ಕೆ ಫ್ರೆಂಡ್ಸ್ ಹೊಳೆಕೆರೆ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ಸಾಲಿಗ್ರಾಮ ಕರಾವಳಿ ಮೊಗವೀರ ಮಹಾಜನ ಸಂಘ ಸಭಾಭವನ ಇಲ್ಲಿ ಭಾನುವಾರ ಜರಗಿತು.

ಕಾರ್ಯಕ್ರಮವನ್ನು ಸಾಸ್ತಾನ ಹೇಲ್ತಕೇರ್ ಇದರ ವೈದ್ಯ ಡಾ. ಹೆಮಂತ್ ಕುಮಾರ್ ಉದ್ಘಾಟಿಸಿ ಮಾತನಾಡಿ ರಕ್ತದಾನ ಎನ್ನುವುದು ದಾನಗಳಲ್ಲಿ ಶ್ರೇಷ್ಠವಾದದ್ದು, ರಕ್ತದ ಮಹತ್ವ ಅರಿತು ರಕ್ತದಾನಗೈದರೆ ಸಾರ್ಥಕ್ಯ ಕಾಣಲು ಸಾಧ್ಯವಿದೆ,ಡಾ.ಜಿ ಶಂಕರ್ ರವರ ಕನಸಿನ ಕೂಸಾದ ರಕ್ತದಾನ ಕಾರ್ಯಕ್ರಮ ಸರ್ವವ್ಯಾಪಿಯಾಗಿ ಪಸರಿಸಿಕೊಂಡಿದೆ.ಇದರಿಂದ ಅದೆಷ್ಟೊ ಜೀವಗಳಿಗೆ ಮರುಜೀವ ನೀಡಲು ಸಹಕಾರಿಯಾಗಿದೆ.
ಪ್ರಸ್ತುತ ಕಾಲಘಟ್ಟದಲ್ಲಿ ಆಧುನಿಕತೆಯ ಜೀವನ ಪದ್ಧತಿಯಿಂದ ಆರೋಗ್ಯವನ್ನು ಹಾಳುಗೆಡವುತ್ತಿದ್ದೇವೆ.ಇದು ವಿಪರ್ಯಾಸಕರ ಬೆಳವಣಿಗೆಯಾಗಿದೆ, ಬದಲಾದ ಆಹಾರ ಕ್ರಮಗಳಿಗೆ ತಿಲಾಂಜಲಿ ಇಟ್ಟು ಹಿಂದಿನ ಪರಂಪರೆಯ ಆಹಾರ ಕ್ರಮಗಳಿಗೆ ಒತ್ತುನೀಡಿ ಎಂದರಲ್ಲದೆ ಈ ಮೂಲಕ ಪರಿಶುದ್ಧ ಆರೋಗ್ಯವಂತ ಜೀವನ ನಡೆಸಲು ಸಹಕಾರಿ, ರಕ್ತದಾನದಂತೆ ಅಂಗಾಂಗ ದಾನ ಕೂಡ ಸರ್ವಶ್ರೇಷ್ಢವಾದದ್ದು ಇದನ್ನು ಪ್ರತಿಯೊಬ್ಬರು ಈ ಕಾರ್ಯಕ್ಕೂ ಕೈಜೋಡಿಸಲು ಕರೆಇತ್ತರು.
ಕಾರ್ಯಕ್ರಮದ ಅಧ್ಯಕ್ಷೆಯನ್ನು ಮೊಗವೀರ ಯುವ ಸಂಘ ಸಾಲಿಗ್ರಾಮ ಘಟಕದ ಅಧ್ಯಕ್ಷ ಕಿರಣ್ ಕುಂದರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ, ಅಘೋರೇಶ್ವರ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕಾರಂತ ,ಕರಾವಳಿ ಮೊಗವೀರ ಮಹಾಜನ ಸಂಘ ಕೋಟ ಇದರ ಕಾರ್ಯದರ್ಶಿ ಕೃಷ್ಣಮೂರ್ತಿ ಮರಕಾಲ,ಮೊಗವೀರ ಯುವ ಸಂಘಟನೆ ಜಿಲ್ಲಾ ಕಾರ್ಯದರ್ಶಿ ರವೀಶ್ ಕೊರವಡಿ,ಮೊಗವೀರ ಯುವ ಸಂಘ ಸಾಲಿಗ್ರಾಮ ಘಟಕದ ಮಾಜಿ ಅಧ್ಯಕ್ಷ ಚಂದ್ರ ಮರಕಾಲ,ಹೆಚ್ ಕೆ ಫ್ರೆಂಡ್ಸ್ ಅಧ್ಯಕ್ಷ ಗಿರೀಶ್ ಗಾಣಿಗ,ಕೆ.ಎಂ.ಸಿ ರಕ್ತನಿಧಿ ಇದರ ವೈದ್ಯೆ ಡಾ.ಆಶ್ನಾ, ಮೊಗವೀರ ಮಹಿಳಾ ಘಟಕದ ಅಧ್ಯಕ್ಷೆ ಶಾಲಿನಿ ವಿಜಯ ಕಾಂಚನ್,ಕಾರ್ಯದರ್ಶಿ ಸೌಜನ್ಯ, ಮೊಗವೀರ ಜಿಲ್ಲಾ ಸಂಘಟನೆಯ ಉಪಾಧ್ಯಕ್ಷ ಮಂಜುನಾಥ ಸುವರ್ಣ,ಜಯಂತ್ ಅಮೀನ್ ಕೋಡಿ,ಜಿಲ್ಲಾ ಸಂಘನೆಯ ಕಾರ್ಯಕಾರಿ ಸದಸ್ಯ ಶ್ರೀಧರ, ಯಕ್ಷವಿಮರ್ಷಕ ಬೇಳೂರು ರಾಘವ ಶೆಟ್ಟಿ, ಮೊಗವೀರ ಯುವ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷ ಶಿವರಾಮ್ ಕೆ.ಎಂ. ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಜು ಕರಾವಳಿ ನಿರೂಪಿಸಿದರು. ಸಾಲಿಗ್ರಾಮಘಟಕದ ಕಾರ್ಯದರ್ಶಿ ಪ್ರವೀಣ್ ಕುಂದರ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿ ವಂದಿಸಿದರು.











