ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಐರೋಡಿ ಗ್ರಾಮಪಂಚಾಯತ್‍ಗೆ ಕೆನರಾ ಬ್ಯಾಂಕ್ ಉಡುಪಿ ರಿಜನಲ್ ಕಛೇರಿ ಇವರ ವತಿಯಿಂದ ಸುಮಾರು 86ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದೆ.
ಈ ಘಟಕದ ಉದ್ಘಾಟನೆಯನ್ನು ಕೆನರಾ ಬ್ಯಾಂಕ್ ಉಡುಪಿ ರಿಜನಲ್ ಕಛೇರಿಯ ಮ್ಯಾನೇಜರ್ ಲೀನಾ ಪಿಂಟೋ ಗೈದರು.
ಕಾರ್ಯಕ್ರಮದಲ್ಲಿ ಮಾತನಾಡಿ ಸರಕಾರ ವಿವಿಧ ಯೋಜನೆಗಳನ್ನು ಬ್ಯಾಂಕ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಭಾಗವಾಗಿ ಮುದ್ರಯೋಜನೆ ಅನೇಕರಿಗೆ ಸ್ವಉದ್ಯೋಗಕ್ಕೆ ಸಹಕಾರಿಯಾಗಿದೆ.ಸ್ಥಳೀಯ ಗ್ರಾಹಕರು ಬ್ಯಾಂಕ್ ಮೂಲಕ ಹಣಕಾಸಿನ ವ್ಯವಹಾರಕ್ಕೆ ಉತ್ತೇಜನ ನೀಡಬೇಕು ಎಂದರಲ್ಲದೆ ಬ್ಯಾಂಕ್‍ಗಳು ಹಣಕಾಸಿನ ವ್ಯವಹಾರಕ್ಕೆ ಸಿಮಿತವಾಗದೆ ಸಮಾಜಿಕ ಕೈಂಕರ್ಯದಲ್ಲೂ ಕೈಜೋಡಿಸಿಕೊಂಡಿದೆ, ಈ ಮೂಲಕ ಪಂಚಾಯತಗೆ ಶುದ್ಧ ಕುಡಿಯುವ ನೀರಿನ ಘಟಕದ ಸದ್ಭಳಕೆ ಮಾಡಿಕೊಳ್ಳಲು ಕರೆನೀಡಿದರು.
ಕೆನರಾ ಬ್ಯಾಂಕ್ ಸಾಸ್ತಾನ ಶಾಖೆಯ ಕೃಷಿ ವಿಸ್ತರ್ಣಾಧಿಕಾರಿ ಅನನ್ಯ ರೈ ಬ್ಯಾಂಕ್ ಸವಲತ್ತು ,ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಐರೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಐರೋಡಿ ಗ್ರಾಮಪಂಚಾಯತ್ ಉಪಾಧ್ಯಕ್ಷ ನಟರಾಜ್ ಗಾಣಿಗ,ಕೆನರಾ ಬ್ಯಾಂಕ್ ಉಡುಪಿ ರಿಜನಲ್ ಕಛೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸಂಜೀವ ಕುಮಾರ್,ಕೆನರಾ ಬ್ಯಾಂಕ್ ಸಾಸ್ತಾನ ಶಾಖಾ ಸೀನಿಯರ್ ಮ್ಯಾನೇಜರ್ ವಂಶಿ ರೆಡ್ಡಿ ಹಾಗೂ ಗ್ರಾಮಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.











