ಕುಂದಾಪುರ ಮಿರರ್ ಸುದ್ದಿ…
ಉಪ್ಪುಂದ: ಕೆಲವು ದಿನಗಳ ಹಿಂದೆ ಬೈಂದೂರು ತಾಲೂಕಿನ ಉಪ್ಪುಂದ ಕರ್ಕಿಕಳಿ ಎಂಬಲ್ಲಿ ಬಿರುಗಾಳಿ ಮಳೆಗೆ ಹಾನಿಗೀಡಾದ ಮನೆಗಳಿಗೆ ಸಾಮಾಜಿಕ ಕಾರ್ಯಕರ್ತ ನಿತಿನ್ ನಾರಾಯಣ್ ಭೇಟಿ ನೀಡಿದರು.

ಈ ಸಂದರ್ಭ ಹಾನಿಗೀಡಾದ ಮಬೆಗಳ ದುರಸ್ತಿಗಾಗಿ ತನ್ನ ದುಡಿಮೆಯ ಹಣದಿಂದ ಧನಸಹಾಯ ಮಾಡಿ ಮಾನವೀಯತೆ ಮೆರೆದರು.
ನಿತಿನ್ ಭೇಟಿ ಸಂದರ್ಭ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಜಗನ್ನಾಥ್ ಖಾರ್ವಿ ಹಾನಿಗೀಡಾದ ಮನೆಗಳ ವೀಕ್ಷಣೆಗೆ ಮಾರ್ಗದರ್ಶನ ನೀಡಿದರು. ಸ್ಥಳೀಯರಾದ ರಾಜಗೋಪಾಲ್ ನಂದನವನ, ಮೂಡಣಗದ್ದೆ ರಾಜೇಶ್ ಗಾಣಿಗ, ಮಧುಕರ ವಂಡ್ಸೆ ಮೊದಲಾದವರು ಉಪಸ್ಥಿತರಿದ್ದರು.











