ಕೋಟತಟ್ಟು ಬಾರಿಕೆರೆ ಹಾಲು ಉತ್ಪದಕಾರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0
289

Click Here

Click Here

ಕುಂದಾಪುರ ಮಿರರ್ ಸುದ್ದಿ… 

ಕೋಟ: ಕೋಟತಟ್ಟು ಬಾರಿಕೆರೆ ಹಾಲು ಉತ್ಪದಕಾರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಮುದ್ಯತಾ ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಸುರೇಶ್ ಕಾಂಚನ್ ವಹಿಸಿದ್ದರು.

Click Here

ಮುಖ್ಯ ಅತಿಥಿಯಾಗಿ ಕೋಟಾತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ, ಪಂಚಾಯತ್ ಸದಸ್ಯೆ ಸರಸ್ವತಿ ಪೂಜಾರಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರು ಮತ್ತು ಸಂಘದ ನಿರ್ದೇಶಕರು ಹಾಜರಿದ್ದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ತಮ್ಮ ವ್ಯಯಕ್ತಿಕ ನೆಲೆಯಲ್ಲಿ ಹೈನುಗಾರ ಕುಟುಂಬದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ರ್ಯಾಂಕ್ ಗಳಿಸಿದ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನಿಡಿ ಗೌರವಿಸಿದರು.ದಕ್ಷಿಣಕನ್ನಡ ಹಾಲು ಉತ್ಪದಕಾರ ಸಂಘ ಮಂಗಳೂರು ಇದರ ನಿರ್ದೇಶಕಿ ಸರಸ್ವತಿ ಹೈನು ಗಾರೆಕೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಸಂಘಕ್ಕೆ ಅತಿಹೆಚ್ಚು ಹಾಲು ನೀಡಿದ ಪ್ರಥಮ ಹಸಿನಬಾನು ಹಾಗೂ ದ್ದೀತಿಯ ಬಹುಮಾನವನ್ನು ಸುರೇಶ್ ಬಾಯರಿ ಮತ್ತು ತೃತಿಯ ಬಹುಮಾನವನ್ನು ಆನಂದ ಪೂಜಾರಿ ಪಡೆದು ಕೊಂಡರು. ಹಾಗೂ ಇನ್ನುಳಿದಂತೆ ಇತರ ಹಾಲು ಉತ್ಪಾದಕರಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಯಿತು.

ಸಂಘದ ಕಾರ್ಯದರ್ಶಿ ಸತೀಶ್ ಕುಂದರ್ ಕಾರ್ಯಕ್ರಮವನ್ನು ಸ್ವಾಗತಿಸಿ ಹಾಗೂ ನಿರೂಪಿಸಿದರು.ಸಂಘದ ಸಿಬಂದ್ದಿ ಶೋಭಾ ಕುಂದರ್ ವಂದನಾರ್ಪಣೆಗೈದರು.

Click Here

LEAVE A REPLY

Please enter your comment!
Please enter your name here