ಕೋಟ – ಗ್ರಾಮಮಟ್ಟದ ಪೋಷಣ್ ಅಭಿಯಾನ ಕಾರ್ಯಕ್ರಮ

0
389

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಆರೋಗ್ಯವಂತ ಜೀವನದತ್ತ ನಮ್ಮ ನಡಿಗೆ ಎಂಬ ಯೋಜನೆಯಡಿ ನಡೆಯುತ್ತಿರುವ ಪೋಷಣ್ ಅಭಿಯಾನ ಪೋಷಣ್ ಮಾಸಾಚರಣೆ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ, ಸಮಾಜವನ್ನು ನಡೆಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ತರವಾದದ್ದು ಎಂದು ಕೋಟ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಹೇಳಿದರು.

ಅವರು ಕೋಟ ಗ್ರಾಮ ಪಂಚಾಯತ್‍ನಲ್ಲಿ ಇತ್ತೀಚಿಗೆ ನಡೆದ ಗ್ರಾಮಮಟ್ಟದ ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Click Here

ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಹಿಂದಿನ ಕಾಲದ ಆಹಾರ ಪದ್ಧತಿಯಲ್ಲಿ ಎಲ್ಲ ಅಂಶಗಳು ಸೇರಿದ್ದವು. ಈಗ ಫಾಸ್ಟ್ ಫುಡ್ ಕಲರ್‍ಫುಡ್‍ಗೆ ಮಾರು ಹೋಗಿರುವ ಯುವ ಜನಾಂಗ ಕಾಯಿಲೆಯ ತುತ್ತಾಗುತ್ತಿದ್ದಾರೆ. ಮತ್ತೆ ನಾವು ಹಳೆಯ ಆಹಾರ ಪದ್ಧತಿ ಅಳವಡಿಸಿಕೊಂಡಲ್ಲಿ ಉಪಯೋಗವಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್.ಕೆ, ಮೂಡುಗಿಳಿಯಾರು ಸರಕಾರಿ ಪ್ರೌಢಶಾಲೆಯ ಅಧ್ಯಾಪಕ ಅಶೋಕ್ ಪಿ.ಎಸ್,ಉಪಾಧ್ಯಕ್ಷ ಜಯಂತಿ ಪೂಜಾರಿ, ಮೂಡುಗಿಳಿಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪದ್ಯಾಯ ರಮೇಶ್ ಭಟ್, ಶಾಂಭವಿ ವಿದ್ಯದಾಯಿನಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ದಿವಾಕರ್ ರಾವ್, ಮಣೂರು ಸರಕಾರಿ ಪ್ರೌಢ ಶಾಲೆಯ ಅಧ್ಯಾಪಕ ನಾಗೇಶ್ ಮಧ್ಯಸ್ಥ, ಮಹಿಳಾ ಮತ್ತು ಕೋಟ ಪಂಚಾಯತ್ ಸದಸ್ಯರು, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿವರ್ಗ, ಎಸ್ ಎಲ್‍ಆರ್‍ಎಂ ಘಟಕದ ಸಿಬ್ಬಂದಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಪ್ರದರ್ಶನದಲ್ಲಿ ಹಸಿರು ತರಕಾರಿಗಳು, ವಿವಿಧ ಔಷಧೀಯ ಸಸ್ಯಗಳು, ಹಣ್ಣುಗಳು, ಸಾಂಬಾರ ಪದಾರ್ಥಗಳು, ಅಂಗನವಾಡಿ ಆಹಾರ, ವಿವಿಧ ಪೌಷ್ಠಿಕ ಆಹಾರಗಳು, ಜನರ ಗಮನಸೆಳೆದವು. ತರಕಾರಿಗಳಲ್ಲಿ ಮೂಡಿಬಂದ ವಿವಿಧ ಕಲೆಗಳ ಪ್ರದರ್ಶನ, ಹಾಗೂ ಬೇಳೆ ಕಾಳುಗಳಲ್ಲಿ ಮಾಡಿದ ಪೋಷಣ್ ಅಭಿಯಾನ ಹಾಗೂ ಐಸಿಡಿಎಸ್ ಚಿಹ್ನೆಗಳು ಹಾಗೂ ಬೆಳವಣಿಗೆ ರೇಖಾ ಪಟ್ಟಿ, ಮತ್ತು ಹೂವಿನಲ್ಲಿ ಮೂಡಿ ಬಂದ ರಂಗೋಲಿ ಕಾರ್ಯಕ್ರಮದ ವಿಶೇಷವಾಗಿತ್ತು. ವಲಯ ಮೇಲ್ವಿಚಾರಕಿ ಮೀನಾಕ್ಷಿ ಸ್ವಾಗತಿಸಿ, ಪಂಚಾಯತ್ ಸಿಬ್ಬಂದಿ ಪೂರ್ಣಿಮಾ ವಂದಿಸಿದರು.ಕಲ್ಮಾಡಿ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here