ಸರಕಾರ ರೈತನ ಬಗ್ಗೆ ನೈಜ ಕಾಳಜಿ ವಹಿಸಲಿ -ಸರಸ್ವತಿ ಜಿ ಪುತ್ರನ್

0
503

Click Here

Click Here

ರೈತರೆಡೆಗೆ ನಮ್ಮ ನಡಿಗೆ, ಹೈನುಗಾರಿಕೆ,ಕೃಷಿ ಕ್ಷೇತ್ರದಲ್ಲಿ ಕೋಟ ಶಾರದ ರಾಮಚಂದ್ರ ಆಚಾರ್ಯಗೆ ಸನ್ಮಾನ

ಕುಂದಾಪುರ ಮಿರರ್ ಸುದ್ದಿ…
ಕೋಟ: ಕೃಷಿ ಮತ್ತು ಹೈನುಗಾರಿಕೆ ಈ ದೇಶದ ಜನರ ಜೀವನಾಡಿಯಾಗಿದೆ ಇದರಿಂದ ಅದೆಷ್ಟೊ ಕುಟುಂಬಗಳು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಕ್ಲಿನ್ ಕುಂದಾಪುರ ಇದರ ಸಂಯೋಜಕಿ ಸರಸ್ವತಿ ಜಿ ಪುತ್ರನ್ ಹೇಳಿದ್ದಾರೆ.

ಶನಿವಾರ ಪಂಚವರ್ಣ ಯುವಕ ಮಂಡಲ ಕೋಟ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿ ರೈತಧ್ವನಿ ಸಂಘ ಕೋಟ ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ,ಗೀತಾನಂದ ಫೌಂಡೇಶನ್ ಮಣೂರು,ಗೆಳೆಯರ ಬಳಗ ಕಾರ್ಕಡ ಇವರುಗಳ ಸಹಯೋಗದಲ್ಲಿ 19 ನೇ ಆವೃತಿಯ ತಿಂಗಳ ಸರಣಿ ಕಾರ್ಯಕ್ರಮ ಸಾಧಕ ಕೃಷಿಕನ ಗೌರವಿಸುವ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ ಸೆ.24ಶನಿವಾರ ಕೋಟ ಪರಿಸರದ ಹೈನುಗಾರಿಕೆ ಮತ್ತು ಕೃಷಿ ಕೇತ್ರದಲ್ಲಿ ಸಾಧನೆಗೈದ ಕದ್ರಿಕಟ್ಟು ಶಾರದ ರಾಮಚಂದ್ರ ಆಚಾರ್ಯ ಇವರನ್ನು ಗೌರವಿಸಿ ಮಾತನಾಡಿ ಈ ದೇಶದ ಆಸ್ತಿ ಕೃಷಿಕ ಅನ್ನುವ ನಾವುಗಳು ಅವರ ಹಿತ ಕಾಯಲು ಬದ್ಧರಾಗಿದ್ದೇವಾ ಎಂದು ವಿಮರ್ಶಿಸಿಕೊಳ್ಳಬೇಕು, ಪ್ರಸ್ತುತ ಕಾಲಘಟ್ಟದಲ್ಲಿ ರೈತನ ಸಮಸ್ಯೆ ಆಲಿಸುವರಿಲ್ಲದಾಗಿದೆ.ಸರಕಾರರ ಬರೇ ಘೋಷಣೆಗಳಲ್ಲೆ ಕಾಲಹರಣ ಮಾಡುತ್ತಿವೆ.ರೈತನಿಗೆ ಬೇಕಾಗುವ ನೈಜ ಸಹಕಾರ ಕಡೆಗಣಿಸುತ್ತಿದೆ ಎಂದು ಛೇಡಿಸಿದರಲ್ಲದೆ.ರೈತರ ಕಲ್ಯಾಣಕ್ಕೆ ನೈಜ ಬುನಾದಿ ಹಾಕಿ ಎಂದು ಜನಪ್ರತಿನಿಧಿಗಳಕದ ತಟ್ಟಿದರು.
ಸಂಘಸಂಸ್ಥೆಗಳಿರುವ ಕಾಳಜಿ ಸರಕಾರಕ್ಕೆ ಇಲ್ಲದಾಗಿದೆ.ಇಲ್ಲಿನ ಪಂಚವರ್ಣ ಯುವಕ ಮಂಡಲದ ರೈತರನ್ನು ಗುರುತಿಸುವ ಕಾಯಕ ಶ್ಲಾಘಿನೀಯ,ಸ್ವಚ್ಛಭಾರತದ ಪರಿಕಲ್ಪನೆಗೆ ಹೊಸ ಆಯಾಮ ನೀಡಿದೆ ಇದೊಂದು ಮಹತ್ತರವಾದ ಮೈಲಿಗಲ್ಲು ಎಂದು ಪ್ರಶಂಸಿಸಿದರು.

Click Here

ಈ ವೇಳೆ ಸಾಧಕ ರೈತ ಮಹಿಳೆ ಶಾರದ ರಾಮಚಂದ್ರ ಆಚಾರ್ಯ ಇವರನ್ನು ಕೃಷಿ ಪರಿಕರಗಳನ್ನು ಫಲಪುಷ್ಭಗಳನ್ನು ಸಮೇತ ಶಾಲು ಹೋದಿಸಿ ಗೌರವಿಸಲಾಗಿತು.ಅಲ್ಲದೆ ಅದರ ಸವಿ ನೆನಪಿಗಾಗಿ ಹಸಿರು ಗಿಡ ನೆಟ್ಟು ಜಾಗೃತಿ ಮೂಡಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಕೋಟ ಶ್ರೀದೇವಿ ಜುವೆಲರ್ಸ್ ಮಾಲಿಕ ಸೀತಾರಾಮ್ ಆಚಾರ್ಯ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ ಜಯರಾಮ್ ಶೆಟ್ಟಿ, ಕೋಟ ಜನತಾ ಫಿಶ್ ಮಿಲ್ ಮ್ಯಾನೇಜರ್ ಶ್ರೀನಿವಾಸ ಕುಂದರ್,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸಂಚಾಲಕಿ ವನೀತಾ ಉಪಾಧ್ಯ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ,ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ ಗಾಣಿಗ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಕಲಾವತಿ ಅಶೋಕ್,ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ,ಹಂದಟ್ಟು ಮಹಿಳಾ ಬಳಗ ಇದರ ಕೋಶಾಧಿಕಾರಿ ಶಕೀಲ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಪೂಜಾರಿ ಸ್ವಾಗತಿಸಿದರು. ಸುಜಾತ ಬಾಯಿರಿ ನಿರೂಪಿಸಿದರು.ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.

ಅಲ್ಲದೆ ಕೇಂದ್ರದ ಕೃಷಿ ಯೋಜನೆಯ ಬಗ್ಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಸಂಯೋಜಕ ರವೀಂದ್ರ ಮೊಗವೀರ ಮಾಹಿತಿ ನೀಡಿದರು.

Click Here

LEAVE A REPLY

Please enter your comment!
Please enter your name here