ಕುಂದಾಪುರ ಮಿರರ್ ಸುದ್ದಿ…
ಕೋಟ: ಸ್ವಚ್ಛತಾ ಹೀ ಸೇವಾ ಆಂದೋಲನದಡಿ ಕೋಡಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬೀಚ್ ಸ್ವಚ್ಛತೆಯನ್ನು ಕೋಡಿ ಗ್ರಾಮ ಪಂಚಾಯತ್, ಮಾಹೆ ವಿಶ್ವವಿದ್ಯಾಲಯದ 50 ಜನ ಸ್ವಯಂಸೇವಕರು ಹಾಗೂ ಗ್ರಾಮ ಪಂಚಾಯತ್‍ನ ಎಸ್‍ಎಲ್ ಆರ್ ಎಂ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಶನಿವಾರ ಹಮ್ಮಿಕೊಳ್ಳಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಭಾಕರ್ ಮೆಂಡನ್, ಗ್ರಾಮ ಪಂಚಾಯತ್ ಸದಸ್ಯರ ಅಂತೋನಿ ಡಿಸೋಜ , ಮಾಹೆ ಯುನಿವರ್ಸಿಟಿಯ ಪ್ರೋ.ಪ್ರವೀಣ್ ,ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಮುಂತಾದವರು ಉಪಸ್ಥಿತರಿದ್ದರು.











