ಕುಂಭಾಸಿ: ನೂತನ ಯಾಗಶಾಲೆ, ಸಭಾಭವನ, ಪಾಕಶಾಲೆ, ಭೋಜನಶಾಲೆ ಮತ್ತು ವಸತಿಗೃಹ ನಿರ್ಮಾಣದ ಶಿಲಾನ್ಯಾಸ

0
311

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠದ ಆಡಳಿತಕ್ಕೆ ಒಳಪಟ್ಟಿರುವ ಶ್ರೀ ನಾಗಾಚಲ ಅಯ್ಯಪ್ಪ ಸ್ವಾಮಿ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನ ಕುಂಭಾಶಿ ಇದರ ನೂತನ ಯಾಗಶಾಲೆ, ಸಭಾಭವನ, ಪಾಕಶಾಲೆ, ಭೋಜನಶಾಲೆ ಮತ್ತು ವಸತಿಗೃಹ ನಿರ್ಮಾಣದ ಶಿಲಾನ್ಯಾಸವನ್ನು ಡಾ.ರಾಮ್‌ಪ್ರಕಾಶ್ ಕಲ್ಗುಜ್ಜಿಕರ್ ಉದ್ಘಾಟಿಸಿದರು.

Click Here

ನಾಗಪಾತ್ರಿ ವೇ.ಮೂ.ಲೋಕೇಶ ಅಡಿಗ, ಶೃಂಗೇರಿ ಶಾರದಾಪೀಠ ಪ್ರಾಂತೀಯ ಧರ್ಮಾಧಿಕಾರಿಗಳ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನದೊಂದಿಗೆ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಆನೆಗುಡ್ಡೆ ಮಹಾಗಣಪತಿ ದೇವಸ್ಥಾನದ ಆಡಳಿತ ಧರ್ಮದರ್ಶಿ
ವೇ.ಮೂ.ಸೂರ್ಯನಾರಾಯಣ ಉಪಾಧ್ಯಾಯರು, ಶ್ರೀಮತಿ ಅಮಿತಾ ಅರುಣ್ ಕಲ್ಗುಜ್ಜಿಕರ್, ಸೃಷ್ಠಿ ಇಂಜಿನಿಯರ್ಸ್‌ ಮಣಿಪಾಲ ಇದರ ಜಯರಾಜ್ ವಿ.ಶೆಟ್ಟಿ, ಸುರೇಶ್ ಗಾಣಿಗ ಕೋಟ, ವಿಠಲ್ ಶೆಟ್ರು, ನಿವೃತ್ತ ಅರಣ್ಯಾಧಿಕಾರಿ ಪ್ರಭಾಕರ್ ಗಾಣಿಗ, ದೀಪಾ ಎಲೆಕ್ಟ್ರಿಕಲ್ಸ್ ಮಾಲೀಕ ಸುರೇಶ್ ಆಚಾರ್ಯ, ದೇವಸ್ಥಾನದ ಅರ್ಚಕರು, ಋತ್ವಿಜರು, ಸಿಬ್ಬಂದಿ ವರ್ಗದವರು, ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here