ಅಮಾಸೆಬೈಲು: ಕೊಡ್ಗಿ ನೆನಪು ಕಾರ್ಯಕ್ರಮ ಉದ್ಘಾಟನೆ

0
513

Click Here

Click Here

ಕೊಡ್ಗಿ ಅವರ ಹೆಸರಿನಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ – ಶೋಭಾ ಕರಂದ್ಲಾಜೆ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಅಮಾಸೆಬೈಲು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿದರವರು ಕೊಡ್ಗಿ ಅವರು. ಅವರ ವ್ಯಕ್ತಿತ್ವ, ಚಿಂತನೆ, ಪ್ರಮಾಣಿಕತೆ, ಕೆಚ್ಚು, ಹೋರಾಟದ ಮನೋಭಾವ ಯುವಕರಿಗೆ ಹಾಗೂ ರಾಜಕಾರಿಣಿಗಳಿಗೆ ಆದರ್ಶ ಪ್ರಾಯವಾಗಿದೆ. ಅವರ ಪ್ರೇರಣ ಶಕ್ತಿ ಮುಂದಿನ ಪಿಳಿಗೆಗೆ ನೆನಪಿಸಲು ರಾಜ್ಯ ಸರಕಾರ ಅಮಾಸೆಬೈಲುನಲ್ಲಿ ಎ.ಜಿ. ಕೊಡ್ಗಿ ಅವರ ಹೆಸರಿನಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲಿ ಎಂದು ಕೇಂದ್ರ ಸರಕಾರದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Video:

Click Here

ಅಮಾಸೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎ.ಜಿ. ಕೊಡ್ಗಿ ಬಯಲು ರಂಗ ಮಂಟಪದಲ್ಲಿ ಶನಿವಾರ ನಡೆದ ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ ಮತ್ತು ಎ.ಜಿ. ಕೊಡ್ಗಿ ಅಭಿಮಾನಿ ಬಳಗ ಆಯೋಜಿಸಿದ ಕೊಡ್ಗಿ ನೆನಪು ಕಾರ್ಯಕ್ರಮ ಉದ್ಘಾಟಿಸಿ, ಕೊಡ್ಗಿ ಅವರ ಭಾವಚಿತ್ರಕ್ಕೆ ಪುಷ್ಬನಮನ ಸಲ್ಲಿಸಿ ಮಾತಾಡಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ಎ.ಜಿ. ಕೊಡ್ಗಿ ಅವರು ಮುಖ ನೋಡಿ ರಾಜಕಾರಣ ಮಾಡಿದವರಲ್ಲ. ಅವರು ನೇರ ಹಾಗೂ ನೀಷ್ಟೂರವಾದಿಯಾಗಿದ್ದರು. ಅವರು ನೀರಾವರಿ ಅಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಬಗ್ಗೆ ಅಘಾದವಾದ ಜ್ಞಾನ ಹೊಂದಿರುದರಿಂದ ಅವರ ಹೆಸರಿನಲ್ಲಿ ರಾಜ್ಯ ಸರಕಾರ ಗ್ರಾಮೀಣಾಭಿವೃದ್ಧಿಯ ಬಗ್ಗೆ ತರಬೇತಿ ನೀಡುವ ಮಾಹಿತಿ ಕೇಂದ್ರ ನಿರ್ಮಿಸಲ್ಲಿ ಎಂದರು.

ಕೊಡ್ಗಿ ನೆನಪು ಕಾರ್ಯಕ್ರಮ ನೇತ್ರತ್ವ ವಹಿಸಿದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಾಸ್ತವಿಕವಾಗಿ ಮಾತನಾಡಿ, ಎ.ಜಿ. ಕೊಡ್ಗಿ ಅವರು ಮಹಾನ್ ವ್ಯಕ್ತಿ. ಅವರು ಎಲ್ಲಾ ರಂಗದಲ್ಲಿಯೂ ಶ್ರೇಷ್ಠತೆ ಹೊಂದಿದವರು. ಸೌಭಾಗ್ಯ ಸಂಜೀವಿನಿ ಯೋಜನೆಯ ಬಗ್ಗೆ ಕನಸ್ಸು ಕಂಡವರು. ಕೊಡ್ಗಿ ಅವರು ಹೈನುಗಾರಿಗೆ, ಕೃಷಿ, ಸಾಹಿತ್ಯ, ಸಾಮಾಜಿಕ, ನೀರಾವರಿ, ಗ್ರಾಮೀಣಾಭಿವೃದ್ಧಿ, ರಾಜಕೀಯ ಎಲ್ಲಾ ರಂಗದಲ್ಲಿಯೂ ಆದರ್ಶ ಹಾಗೂ ಅಪರೂಪದ ವ್ಯಕ್ತಿಯಾಗಿದ್ದವರು. ಅವರ ನೆನಪುಗಳು ಮುಂದುವರಿಸುವ ದೃಷ್ಠಿಯಲ್ಲಿ ಇಂದು ಕೊಡ್ಗಿ ನೆನಪು ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಹೇಳಿದರು.

ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕರ್ಣಾಟಕ ಬ್ಯಾಂಕ್ ಅಮಾಸೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನೀಡಿರುವ ಬಸ್ ನಿರ್ವಹಣೆಗಾಗಿ ನೀಡಿದ ಚೆಕ್‍ನ್ನು ಶಾಲೆಗೆ ಹಸ್ತಾಂತರ ಮಾಡಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಬಸ್ರೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾ„ಕಾರಿ ಡಾ| ಎಲ್. ಎಚ್. ಮಂಜುನಾಥ್, ಕರ್ಣಾಟಕ ಬ್ಯಾಂಕ್‍ನ ಹಿರಿಯ ಮಾರಾಟ ಅ„ಕಾರಿ ಗೋಕುಲದಾಸ್, ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಹಿರಿಯರಾದ ಬಿ.ಕೆ. ನರಸಿಂಹ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಎ. ಅಶೋಕಕುಮಾರ ಕೊಡ್ಗಿ ಸ್ವಾಗತಿಸಿದರು. ಪತ್ರಕರ್ತ ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಯು.ಎಸ್. ಶೆಣೈ ವಂದಿಸಿದರು.

Click Here

LEAVE A REPLY

Please enter your comment!
Please enter your name here