ಕುಂದಾಪುರ :ಅ.8ರಂದು ಕುಂದಾಪುರದಲ್ಲಿ ‘ಬಾಲವನದ ಜಾದೂಗಾರ’ ಕಿರುಚಿತ್ರ ಪ್ರದರ್ಶನ

0
275

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ವಸಂತ ಪ್ರೊಡಕ್ಷನ್ ಹೌಸ್ ಕುಂದಾಪುರ ವತಿಯಿಂದ ‘ಬಾಲವನದ ಜಾದೂಗಾರ’ ಎಂಬ ಕಿರು ಶೈಕ್ಷಣಿಕ ಚಿತ್ರ ನಿರ್ಮಾಣ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಲಕ್ಷ್ಯದಲ್ಲಿರಿಸಿಕೊಂಡು, ಕಾರಂತರ ಆಶಯಗಳನ್ನು ಪರಿಣಾಮಕಾರಿಯಾಗಿ ಚಿತ್ರದಲ್ಲಿ ಬಿಂಬಿಸಲಾಗಿದೆ. ಈ ಕಿರುಚಿತ್ರದ ಪ್ರಪ್ರಥಮ ಪ್ರದರ್ಶನ ಕುಂದಾಪುರದಲ್ಲಿ ಅ.8 ಶನಿವಾರ ಸಂಜೆ ಗಂಟೆ 6.30ಕ್ಕೆ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ವಸಂತ ಪ್ರೋಡಕ್ಷನ್ ಹೌಸ್ ಇದರ ಕೆ. ಪಿ. ಶ್ರೀಶನ್ ಕುಂದಾಪುರ ಹೇಳಿದರು.

Click Here

ಅವರು ಗುರುವಾರ ಸುದ್ಧಿಗೋಷ್ಠಿ ಮಾತನಾಡಿ ‘ಬಾಲವನದ ಜಾದೂಗಾರ’ ಕಿರು ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಶಿಕ್ಷಕರು ಹಾಗೂ ತಂದೆ ತಾಯಿಯವರಿಂದ ಉತ್ತಮ ಸಂಸ್ಕಾರ, ಮಾರ್ಗದರ್ಶನ ದೊರೆತಾಗ ಕೋಟ ಶಿವರಾಮ ಕಾರಂತರಂತಹ ಸಾಹಿತಿಗಳ ಬರಹಗಳ ಅಧ್ಯಯನದಿಂದ ಅವರು ಸ್ಪೂರ್ತಿ, ಪ್ರೇರಣೆ ಪಡೆದಾಗ ಅವರ ವ್ಯಕ್ತಿತ್ವದಲ್ಲಾಗುವ ಬದಲಾವಣೆ ಬಗ್ಗೆ ಕ್ಷಕಿರಣ ಬೀರುವುದೆ ಈ ಚಿತ್ರದ ಮೂಲ ತತ್ವ ವಾಗಿದೆ. ತುಂಟ ಹುಡುಗನೂ ಹೇಗೆ ಪರಿವರ್ತನೆಗೊಳ್ಳುತ್ತಾನೆ ಎಂದು ಪರಿಣಾಮಕಾರಿಯಾಗಿ ಈ ಚಿತ್ರ ತೋರಿಸುತ್ತದೆ ಎಂದರು.
ಈ ಚಿತ್ರವನ್ನು ಕೇರಳದ ಖ್ಯಾತ ನಿರ್ದೇಶಕ ಇ. ಎಂ. ಅಶ್ರಫ್ ನಿರ್ದೇಶಿಸಿದ್ದು, ಸ್ಥಳೀಯ ಕಲಾವಿದರೂ ಈ ಚಿತ್ರದಲ್ಲಿ ಉತ್ತಮ ಪಾತ್ರ ನಿರ್ವಹಿಸಿದ್ದಾರೆ. ಕುಂದಾಪುರ-ಕೋಟ ಪರಿಸರದಲ್ಲಿ ಈ ಚಿತ್ರದ ಚಿತ್ರೀಕರಣವಾಗಿದೆ. ಕುಂದಾಪುರ ವೆಂಕಟರಮಣ ಶಾಲೆಯ 50-60 ವಿದ್ಯಾರ್ಥಿಗಳು ನಟಿಸಿದ್ದಾರೆ. ನಮ್ಮ ಭೂಮಿ ಸಂಸ್ಥೆ ಕನ್ಯಾನ, ವೆಂಕಟರಮಣ ಶಾಲೆಯಲ್ಲಿಯೂ ಚಿತ್ರೀಕರಣಗೊಂಡಿದೆ. 35 ನಿಮಿಷದ ಚಿತ್ರ ಇದಾಗಿದೆ ಎಂದರು.
ಸಾಕಷ್ಟು ಬಂಡವಾಳದೊಂದಿಗೆ ‘ಬಾಲವನದ ಜಾದೂಗಾರ’ ನಿರ್ಮಾಣ ಮಾಡಿರುವುದರಿಂದ ಇದನ್ನು ಉಚಿತವಾಗಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗಾಗಿ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಬಹುತೇಕ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಈ ಚಲನಚಿತ್ರ ನೋಡಬೇಕೆಂಬ ಆಶಯ ನಮ್ಮದು. ವಿದ್ಯಾಭಿಮಾನಿಗಳು, ಪ್ರದರ್ಶನ ಪ್ರಾಯೋಜಕತ್ವ ವಹಿಸಿದರೆ ಅನುಕೂಲವಾಗುತ್ತದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಯು.ಎಸ್ ಶೆಣೈ, ಜೋಯ್ ಕರ್ವಾಲೊ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here