ಕುಂದಾಪುರ ತಾ| ಜೋಗಿ ಸಮಾಜ ಸೇವಾ ಸಮಿತಿ: ಕ್ರೀಡಾಕೂಟ

0
325

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಕುಂದಾಪುರ ತಾಲೂಕು ಜೋಗಿ ಸಮಾಜ ಸೇವಾ ಸಮಿತಿಯ 14ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಕ್ರೀಡಾಕೂಟ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಿತು.

Click Here

ಕ್ರೀಡಾಕೂಟವನ್ನು ಡಾ. ಪ್ರಿಯಾಂಕ ಜೋಗಿ ಉದ್ಘಾಟಿಸಿದರು. ಅಶೋಕ ಬಳೆಗಾರ್ ಕಟ್‍ಬೆಲ್ತೂರ್ ಅಧ್ಯಕ್ಷತೆ ವಹಿಸಿದ್ದರು, ಈ ಸಂದರ್ಭದಲ್ಲಿ ಜೋಗಿ ಸಮಾಜ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶೇಖರ್ ಬಳೆಗಾರ್ ಕಟ್ಟಬೇಲ್ತೂರು, ಬೈಂದೂರು ಜೋಗಿ ಸಮಾಜ ಸೇವಾ ಸಮಿತಿಯ ಅಧ್ಯಕ್ಷರಾದ ದಯಾನಂದ ಜೋಗಿ, ದೈಹಿಕ ಶಿಕ್ಷಕರಾದ ಸಂತೋಷ, ಹಾಗೂ ವಿಶ್ವನಾಥ ಉಪಸ್ಥಿತರಿದ್ದರು.

ಕ್ರೀಡಾ ಕಾರ್ಯದರ್ಶಿ ವೀರೇಂದ್ರ ಜೋಗಿ ಹರವರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಪ್ರಧಾನ ಕಾರ್ಯದರ್ಶಿ ಶೇಖರ್ ಜೋಗಿ ಮೂಡುಗೋಪಾಡಿ ಸ್ವಾಗತಿಸಿದರು, ರಾಘವೇಂದ್ರ ಜೋಗಿ ಕಟ್‍ಬೇಲ್ತೂರು ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಚಂದ್ರ ಜೋಗಿ ಶಾನ್ಕಟ್ಟು ವಂದಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು, ಜೋಗಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕು ಜೋಗಿ ಸಮಾಜಬಾಂಧವರು ಭಾಗವಹಿಸಿದ್ದರು.

Click Here

LEAVE A REPLY

Please enter your comment!
Please enter your name here