ಕುಂದಾಪುರ ಮಿರರ್ ಸುದ್ದಿ…
ಕೋಟ: ಇತ್ತೀಚಿಗೆ ಕರ್ನಾಟಕ ಬ್ಯಾಂಕ್ ಸಹಯೋಗದಲ್ಲಿ ಮಂಗಳೂರಿನ ಹೋಟಲ್ ಓಶಿಯನ್ ಪರ್ಲ್‍ನಲ್ಲಿ ನಡೆದ ನಿಟ್ಟೆ ಕೆ.ಬಿ.ಎಲ್ ಕಿರು ಸಣ್ಣ ಮತ್ತು ಮಾಧ್ಯಮ ಉದ್ಯಮಗಳ ಸಮಾವೇಶದಲ್ಲಿ ಕೋಟದ ಪರಿವರ್ತನ ಪುನರ್ವಸತಿ ಕೇಂದ್ರಕ್ಕೆ ಅತ್ಯುತ್ತಮ ಸಾಮಾಜಿಕ ಸೇವಾಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಲಾಯಿತು .
ಕರ್ನಾಟಕ ಬ್ಯಾಂಕ್‍ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಮ್ ಎಸ್ ಕಾರ್ಯಕ್ರಮ ಉದ್ಘಾಟಿಸಿ , ಪ್ರಶಸ್ತಿ ಪ್ರದಾನ ಮಾಡಿದರು . ಕೋಟದ ಪರಿವರ್ತನ ಪುನರ್ವಸತಿ ಸಂಸ್ಥೆಯ ನಿರ್ದೇಶಕರಾದ ಡಾ. ಪ್ರಕಾಶ್ ಸಿ ತೋಳಾರ್ ಹಾಗೂ ಡಾ. ಸತೀಶ್ ಪೂಜಾರಿ ಯವರು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು .
ಈ ಸಂದರ್ಭ ಗಣ್ಯರಾದ ಸತೀಶ್ ಕುಮಾರ್ ಭಂಡಾರಿ, ಕಿಶೋರ್ ಕುಮಾರ್ ಕೊಡ್ಗಿ, ಶಶಿಧರ್ ಪೈ ಮಾರುರ್ , ಗೋಕುಲ್ ದಾಸ್ ಪೈ , ರವೀಂದ್ರ ಬಾಬು ಎಂ ವಿನಯ್ ಗುಪ್ತಾ , ಅಶೋಕ್ ತಮ್ಮಯ್ಯ ಉಪಸ್ಥಿತರಿದ್ದರು.











