ಕುಂದಾಪುರ ಮಿರರ್ ಸುದ್ದಿ…
ಕೋಟ: ರಾಜ್ಯ ಸರಕಾರದ ಆದೇಶದಂತೆ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ರಾಜಶೇಖರ ದೇವಳದ ಸಭಾಂಗಣದಲ್ಲಿ ಹಮ್ಮಿಕೊಂಡಿತು.
ಅತಿಥಿಗಳಾಗಿ ಕೋಟ ಗ್ರಾ.ಪಂ ಅಧ್ಯಕ್ಷ ಅಜಿತ್ ದೇವಾಡಿಗ, ಸದಸ್ಯರಾದ ಸಂತೋಷ್ ಪ್ರಭು, ಚಂದ್ರ ಪೂಜಾರಿ, ಸಾಲಿಗ್ರಾಮ ಶ್ರೀ ಗುರುಮರಸಿಂಹ ದೇವಸ್ಥಾನ ಇದರ ಧರ್ಮದರ್ಶಿ ಕೆ.ಅನಂತಪದ್ಮನಾಭ ಐತಾಳ್ ,ಕೋಟ ಅಮೃತೇಶ್ವರಿ ದೇವಳದ ಟ್ರಸ್ಟಿಗಳಾದ ಎಂ ಸುಬ್ರಾಯ ಆಚಾರ್ಯ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ,ಕಾರ್ಯದರ್ಶಿ ನಿತೀನ್ ಕುಮಾರ್ ,ಗೌರವ ಸಲಹಾ ಸಮಿತಿಯ ಉಮೇಶ್ ಪ್ರಭು,ಚಂದ್ರ ಆಚಾರ್ಯ,ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ,ಉಪಾಧ್ಯಕ್ಷೆ ವಸಂತಿ ಉಮೇಶ್, ಪ್ರೇಮಾ ಆಚಾರ್ಯ,ಕೋಟ ಗ್ರಾಮಸಂಜೀವಿನಿಒಕ್ಕೂಟದ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು.











