ಕುಂದಾಪುರ ಮಿರರ್ ಸುದ್ದಿ…
ಕೋಟ: ಮಣೂರು ಬಾಳೆಬೆಟ್ಟು ಫ್ರೆಂಡ್ಸ್ ಬಾಳೆಬೆಟ್ಟು ಮತ್ತು ಭಗತ್ ಸಿಂಗ್ ಯುವ ವೇದಿಕೆ ಕೋಟ ಪ್ರಸ್ತುತಿಯಲ್ಲಿ ನಡೆಯುವ 5ನೇ ವರ್ಷದ ಸ್ಪರ್ಶ 2023ರ ಸಂಭ್ರಮದ ಕಾರ್ಯಕ್ರಮದ ಪೋಸ್ಟರ್ ಅನ್ನು ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಇವರು ಅನಾವರಣಗೊಳಿಸಿದರು.
ಈ ಸಂದರ್ಭ ಸ್ಪರ್ಶ ಕಾರ್ಯಕ್ರಮದ ಸಂಚಾಲಕರಾದ ಹರೀಶ್ ಕುಮಾರ್ ಶೆಟ್ಟಿ, ಸಹ ಸಂಚಾಲಕರಾದ ಗಿರೀಶ್ ಕುಮಾರ್ ಶೆಟ್ಟಿ, ಬಾಳೆಬೆಟ್ಟು ಪ್ರೆಂಡ್ಸ್ ಅಧ್ಯಕ್ಷ ರತ್ನಾಕರ್ ಪೂಜಾರಿ, ಭಗತ್ ಸಿಂಗ್ ಯುವವೇದಿಕೆಯ ಅಧ್ಯಕ್ಷ ಪ್ರಸಾದ್ ಬಿಲ್ಲವ ಹಾಗೂ ಎರಡು ಸಂಘಟನೆಗಳ ಪ್ರಮುಖ ಸದ್ಯಸ್ಯರು ಉಪಸ್ಥಿತರಿದ್ದರು .
ಅಂದು ಕಾರ್ಯಕ್ರಮದಲ್ಲಿ ಸಾಹಿತಿ ಸವ್ಯಸಾಚಿ ನರೇಂದ್ರಕುಮಾರ್ ಕೋಟ ಇವರಿಗೆ ಹುಟ್ಟೂರ ಸನ್ಮಾನ ಮತ್ತು ಕೃಷಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ,ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದ ವಿವಿಧ ಸಾಧಕರಿಗೆ ವಿಶೇಷ ಅಭಿನಂದನೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ಸಾಂಸ್ಕೃತೀಕ ಕಾರ್ಯಕ್ರಮದ ಅಂಗವಾಗಿ ಐತಿಹಾಸಿಕ ಪ್ರದರ್ಶನ ಕಂಡ ಕಾಂತಾರ ಸಿನಿಮಾದ ಸ್ವರಾಜ್ ಶೆಟ್ಟಿ ಅಭಿನಯದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ತುಳು ನಾಟಕ ಶಿವದೂತ ಗುಳಿಗ ಪ್ರಪ್ರಥಮ ಭಾರಿಗೆ ಕನ್ನಡದಲ್ಲಿ ನಡೆಯಲಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.











