ಕುಂದಾಪುರ ಮಿರರ್ ಸುದ್ದಿ…
ಕೋಟ: ಉಡುಪಿಯ ಅಮೃತ ಗಾರ್ಡನ್‍ನಲ್ಲಿ ಜರುಗಿದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್‍ನಲ್ಲಿ ಕೋಟದ ವಿವೇಕ ಆಂಗ್ಲ ಮಾಧ್ಯಮದ ಎಂಟನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ನಕ್ಷತ್ರಿ ಕಟಾ ವಿಭಾಗದಲ್ಲಿ ತೃತೀಯ, ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಪಾರಂಪಳ್ಳಿಯ ಶೈಲಾ ಮತ್ತು ಬಾಲಕೃಷ್ಣ ನಕ್ಷತ್ರಿಯವರ ಪುತ್ರ. ಕೋಡಿಕನ್ಯಾಣ ಜಗನ್ನಾಥ್ ಅಮೀನ್ ಅವರಲ್ಲಿ ಕರಾಟೆ ತರಬೇತಿಯನ್ನು ಪಡೆಯುತ್ತಿದ್ದಾರೆ.











