ಪಂಚವರ್ಣ ಪಂಚೇಂದ್ರಿಯದಂತೆ ಕೆಲಸ ನಿರ್ವಹಿಸುತ್ತಿದೆ –ಮೂಡುಬಿದ್ರೆ ಶ್ರೀ

ಕೋಟ: ಪಂಚವರ್ಣದವರು ಸದ್ಭಾವನೆ ಅರ್ಥ ನೀಡುವ ಮೂಲಕ ಕನ್ನಡ ರಾಜ್ಯೊತ್ಸವ ನವ ಕಾಯಕಲ್ಪ ನೀಡಿದ್ದಾರೆ ಎಂದು ಮೂಡುಬಿದರೆ ಜೈನಮಠದ ಸ್ವಸ್ತೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಶ್ರೀಪಾದಂಗಳ ನುಡಿದರು.
ಕೋಟದ ವರುಣತೀರ್ಥಕೆರೆ ಸಮೀಪ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ರಜತಮಹೋತ್ಸವದ ಅಂಗವಾಗಿ ಕನ್ನಡ ರಾಜ್ಯೋತ್ಸವ ಸದ್ಭಾವನಾ 2022 ಶೀರ್ಷಿಕೆಯಡಿ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿ ಮಾತನಾಡಿ ಕೂಟ ಮಹಾಜಗತ್ತಿನ ಈ ಪರಿಸರದಲ್ಲಿ ನಾವೆಲ್ಲ ಒಂದೇ ಎನ್ನುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ವೇಗ ನೀಡಿದ್ದಾರೆ.
ಕನ್ನಡದ ಮನಸ್ಸು ಶ್ರೇಷ್ಠತೆ ಹೊಂದಿದ್ದಾರೆ,ಸಭ್ಯ ಸುಸಂಸ್ಕ್ರತ ನಾಡು,ಭಾಷಾಭಿಮಾನ ಇಡೀ ವಿಶ್ವಕ್ಕೆ ಪಸರಿಸಿಕೊಂಡಿದ್ದಾರೆ, ಕನ್ನಡದವರು ಹೃದಯ ಶ್ರೀಮಂತಿಕೆಯ ಮೆರೆದಿದ್ದಾರೆ, ಪಂಚರ್ಣದವರು ಪಂಚೇಂದ್ರಿಯದಂತೆ ಕೆಲಸ ನಿರ್ವಹಿಸಿ ಕನ್ನಡದ ಕಂಪು ಪಸರಿಸಿ ಪರಿಸರಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವು ಶ್ಲಾಘನೀಯ, ನಮ್ಮ ಕನ್ನಡ ಬ್ಯಾಂಕ್ ರಾಷ್ಟ್ರ ,ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಇಂಥಹ ಬ್ಯಾಂಕ್ ಎಂ.ಡಿಯವರಿಗೆ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣ,ಪ್ರತಿ ಮನೆಯಲ್ಲಿ ಗಿಡನೆಡಿ,ಕೃಷಿಕಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದರಲ್ಲದೆ ಮನೆ ಮನೆಯಲ್ಲಿ ಕನ್ನಡ ಮಾತು ಆಡುವುದರ ಮೂಲಕ ಕನ್ನಡ ಭಾಷೆ ನಿತ್ಯ ನಿತ್ಯ ನಿರಂತರವಾಗಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಸಾಧಕ ಕರ್ಣಾಟಕ ಬ್ಯಾಂಕ್ ಎಂ.ಡಿ ಮಹಾಬಲೇಶ್ವರ ಎಂಎಸ್ ಇವರಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ವಹಿಸಿದ್ದರು.
ಕೋಟೇಶ್ಚರ ವರದರಾಜ ಶೆಟ್ಟಿ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ ಆಶಯದ ನುಡಿಗೈದರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಅಭಿನಂದನಾ ಮಾತುಗಳನ್ನಾಡಿದರು.
ಸಮೃದ್ಧಿ ಮಹಿಳಾ ಮಂಡಲ ಚೇರ್ಕಾಡಿ ಇವರಿಗೆ ಪಂಚವರ್ಣ ವಿಶೇಚ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಂಗಳೂರಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಅರ್ಜುನ್ ಭಂಡಾರ್ಕರ್ ಹಾಗೂ ಕೋಟದ ನಿಸ್ವಾರ್ಥ ಸೇವಾ ಟ್ರಸ್ಟ್ ಇವರ ಇವರ ಸಮಾಜಸೇವೆಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಡ್ರಾಮಾ ಜೂನಿಯರ್ ಪ್ರಶಸ್ತಿ ವಿಜೇತ ಸಮೃದ್ಧಿ ಕುಂದಾಪುರ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮಣಿಪಾಲದ ಸರಳಬೆಟ್ಟು ಹೊಳಬೆಳಕು ಅನಾಥಾಶ್ರಮ ಇದರ ವಿನಯಚಂದ್ರ ಸಾಸ್ತಾನ ಇವರಿಗೆ ಅಕ್ಕಿ ಮತ್ತು ಪಡಿತರ ಹಸ್ತಾಂತರಿಸಲಾಯಿತು. ಸಂಸ್ಥೆ ಇರ್ವರು ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಸೇರಿದಂತೆ ಹಾಲಾಡಿ ಉದಯ್ ಕುಮಾರ್ ಶೆಟ್ಟಿ ಅನಾರೋಗ್ಯ ನಿಧಿ,ಸಂಸ್ಥೆಯ ಮಾಜಿ ಅಧ್ಯಕ್ಷ ಉದಯ್ ಪೂಜಾರಿ ಸ್ಮರಣಾರ್ಥ ಸ್ಥಳೀಯ ಪ್ರಾಥಮಿಕ ಶಾಲೆಗಳಿಗೆ ದತ್ತಿನಿಧಿ ,ವಿದ್ಯಾರ್ಥಿವೇತನ ನೀಡಲಾಯಿತು.ಇತ್ತೀಚಿಗೆ ನಡೆದ ಕೋಟ ಹೋಬಳಿ ಮಟ್ಟದಲ್ಲಿ ನಡೆದ ಪ್ರಾಥಮಕ ಹಾಗೂ ಫ್ರೌಢಶಾಲಾ ವಿಭಾಗದ ಪ್ರಭಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಸೇರಿದಂತೆ ನಗದು ನೀಡಿ ಗೌರವಿಸಲಾಯಿತು. ಕಲ್ಮಾಡಿ ಅಂಗನವಾಡಿಗೆ ಚೇರ್ ವಿತರಣೆ ನಡೆಯಿತು.
ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಎಸ್ ಹೆಗ್ಡೆ ಶ್ರೀಂಗೇರಿಯ ವೇರಿಕೊಸ್9 ತಜ್ಞ ಡಾ.ಎಂ.ವಿ ಉರಾಳ,ಮನೋ ವೈದ್ಯ ಡಾ.ಸಿ ಪ್ರಕಾಶ್ ತೋಳಾರ್,ಮುಂಬೈ ಉದ್ಯಮಿ ಬಡಾಮನೆ ರತ್ನಾಕರ್ ಶೆಟ್ಟಿ, ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್,ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜಸೇವಾ ಸಮಿತಿ ರಾಜ್ಯ ಅಧ್ಯಕ್ಷ ದೇವರಾಜ್ ಜೋಗಿ, ಗಾಣಿಗ ಸಮಾಜ ಸೇವಾ ಸಮಿತಿ ಮುಂಬೈ ಅಧ್ಯಕ್ಷ ಬಿ.ವಿ ರಾವ್ ,ಸೃಷ್ಠಿ ಇಂಜಿನಿಯರಿಂಗ್ ಮಣಿಪಾಲದ ಮುಖ್ಯಸ್ಥ ಜಯರಾಜ್ ವಿ ಶೆಟ್ಟಿ,ಉದ್ಯಮಿ ಎಂ.ಸಿ ಚಂದ್ರಶೇಖರ, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್,ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣದ ಗೌರವ ಸಲಹೆಗಾರ ಚಂದ್ರ ಆಚಾರ್ಯ ಸ್ವಾಗತಿಸಿದರೆ,ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವನೆ ಸಲ್ಲಿಸಿದರು.ಕಾರ್ಯದರ್ಶಿ ನಿತೀನ್ ಕುಮಾರ್ ಕೋಟ ವರದಿ ವಾಚಿಸಿದರು.ಕಾರ್ಯಕ್ರಮವನ್ನು ಚಿತ್ರಪಾಡಿ ಶಾಲೆಯ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು.ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ವಂದಿಸಿದರು.ಉಪನ್ಯಾಸಕ ರಾಘವೇಂದ್ರ ತುಂಗ ಸಂಯೋಜಿಸಿದರು.ನಿಟ್ಟೂರು ಶಾಲೆಯ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಕೋಟ ಸಹಕರಿಸಿದರು.ಇದಾದ ನಂತರ ಮಂಗಳೂರಿನ ಪ್ರಸಿದ್ಧ ನಾಟಕ ತಂಡ ಚಾ..ಪರ್ಕಾ ಕಲಾವಿದರಿಂದ ನಾಯಿ ಬಾಲ ನಾಟಕ ಪ್ರದರ್ಶನಗೊಂಡಿತು.
ಪ್ರಶಸ್ತಿ ಹಿಂದೆ ನಾವು ಹೋಗಬಾರದು ಅದು ನಮ್ಮನ್ನು ಅರಸಿ ಬರಬೇಕು ಇದು ನಮ್ಮ ಹಿರಿಯರು ನೀಡಿದ್ದಾರೆ,ಈ ಯುವಕ ಮಂಡಲ ನಡೆದುಬಂದ ದಾರಿ ಅದ್ಭುತ ,ರಾಜ್ಯ ರಾಷ್ಟ್ರ ಮಟ್ಟದಲ್ಲಿ ಅನುಕರಿಸಬಹುದಾದ ಕಾರ್ಯಕ್ರಮ ಆಯೋಜಿಸುತ್ತಿದೆ ಆದರ್ಶಮಯ ಯುವಕ ಮಂಡಲ ಎಂದು ಪ್ರಶಂಸಿಸಿದರು.ಇಂಥಹ ಸಂಸ್ಥೆಯ ಜಿತೆ ನಾವುಗಳು ಬೆರೆತು ಕಾರ್ಯನಿರ್ವಹಿಸಬೇಕು ಇದು ನನ್ನಗೆ ಸಂದ ಗೌರವ ಅಲ್ಲ ಕರ್ಣಾಟಕ ಬ್ಯಾಂಕಿಗೆ ನೀಡಿದ ಗೌರವ,ಕರ್ಣಾಟಕ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಸೃಷ್ಠಿಸಿದೆ ಇದು ನಾಪು ಉಲ್ಲೇಖಿಸುವುದಲ್ಲ ಜನಸಾಮಾನ್ಯರು ನೀಡಿದ ಗೌರವ ಎಂದು ಅಭಿಪ್ರಾಯಪಟ್ಟರು –
ಎಂ.ಎಸ್ ಮಹಾಬಲೇಶ್ವರ ಭಟ್











