ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ಹೆದ್ದಾರಿ ಬೊಬ್ಬರ್ಯ ಕಟ್ಟೆ ಫ್ರೆಂಡ್ಸ್ ಮತ್ತು ಭಕ್ತಾಧಿಗಳ ನೆರವಿನೊಂದಿಗೆ ಶುಕ್ರವಾರ ಕೋಟ ಅಮೃತೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳದ ಗಣಪತಿ ದೇವರಿಗೆ ಪ್ರಭಾವಳಿಯನ್ನು ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಸಮ್ಮುಖದಲ್ಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಳದ ಆಡಳಿತ ಮಂಡಳಿ ಸದಸ್ಯ ಚಂದ್ರ ಪೂಜಾರಿ, ಹೆದ್ದಾರಿ ಕಟ್ಟೆ ಬಳಗದ ಜೀವನ್ ಮಿತ್ರ ನಾಗರಾಜ್ ಪುತ್ರನ್,ನಾಗೇಂದ್ರ ಪುತ್ರನ್,ಭೋಜ ಪೂಜಾರಿ,ದಿನಕರ ಪುತ್ರನ್,ಭರತ್ ಗಾಣಿಗ,ಮೇಳದ ಮ್ಯಾನೇಜರ್ ಕೋಟ ಸುರೇಶ್,ಹಿರಿಯರಾದ ವಳಮಾಡು ಸೋಮ ಮರಕಾಲ,ಕಟ್ಟೆ ಬಳಗದ ಪ್ರಮುಖರು ಉಪಸ್ಥಿತರಿದ್ದರು.











